ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕಿಶೋರಾವಸ್ಥೆಯ ಕಾರ್ಮಿಕ ಕಾಯ್ದೆ ಕುರಿತು ಸೆ.13ರಿಂದ 16ರ ವರೆಗೆ ಯಕ್ಷಗಾನ ಪ್ರದರ್ಶನ

ಉಡುಪಿ: ಉಡುಪಿ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಉಡುಪಿ ಜಿಲ್ಲೆ, ಗ್ರಾಮ ಪಂಚಾಯತ್‌ಗಳು ಹಾಗೂ ಪಟ್ಟಣ ಪಂಚಾಯತ್ ಸಾಲಿಗ್ರಾಮ ಇವರ ಸಂಯುಕ್ತ ಆಶ್ರಯದಲ್ಲಿ ಎಸ್.ಸಿ.ಎಸ್.ಪಿ ಮತ್ತು ಟಿ. ಎಸ್.ಪಿ ಯೋಜನೆಯಡಿ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆಯ ಕಾರ್ಮಿಕ ಕಾಯ್ದೆ ಕುರಿತು ಉಡುಪಿಯ ಶಶಿಚಂದ್ರ ಯಕ್ಷ ಬಳಗದ ವತಿಯಿಂದ ಈ ಕೆಳಕಂಡ ಸ್ಥಳಗಳಲ್ಲಿ ಯಕ್ಷಗಾನದ ಮೂಲಕ ಅರಿವು ಕಾರ್ಯಕ್ರಮ ನಡೆಯಲಿದೆ.

ಸೆಪ್ಟೆಂಬರ್ 13 ರಂದು ಸಂಜೆ 4.30 ಕ್ಕೆ ಕರ್ಜೆ ಗದ್ದುಗೆ ದೇವಸ್ಥಾನದ ನೂಜಿ ಸಮುದಾಯ ಭವನದಲ್ಲಿ ಕಾರ್ಯಕ್ರಮದ ಉದ್ಘಾಟನೆಯ ನಂತರ ಯಕ್ಷಗಾನ, ಸಂಜೆ 6.30 ಕ್ಕೆ ಚಾಂತಾರು ನಂದಿಗುಡ್ಡೆ ಬಬ್ಬುಸ್ವಾಮಿ ದೇವಸ್ಥಾನ, ರಾತ್ರಿ 8 ಗಂಟೆಗೆ ಹಂದಾಡಿ ಬೇಳೂರು ಜಿಡ್ಡು ಹಾಲು ಡೈರಿಯಲ್ಲಿ, ಸೆ.14 ರಂದು ಸಂಜೆ 5 ಕ್ಕೆ ಹಂಗಾರಕಟ್ಟೆ ಬಾಳುದ್ರು ಸ.ಹಿ.ಪ್ರಾ.ಶಾಲೆ, ಸಂ. 6.30 ಕ್ಕೆ ಪಾಂಡೇಶ್ವರ ಅನುದಾನಿತ ಹಿ. ಪ್ರಾ.ಶಾಲೆ, ರಾ.8 ಗಂಟೆಗೆ ಕೋಡಿ ಕನ್ಯಾನ ಅಂಗನವಾಡಿ ಶಾಲೆ ಬಳಿ,ಸೆ.15 ರಂದು ಸಂ. 5 ಕ್ಕೆ ಸಾಲಿಗ್ರಾಮದ ಚಿತ್ರಪಾಡಿ ಶಾಲೆ, ಸಂ. 6. 30 ಕ್ಕೆ ಕಾರ್ಕಡ ಸಮುದಾಯ ಭವನ, ರಾ.8 ಕ್ಕೆ ಗುಂಡಿಯಕ್ಷಗಾನ ಕಲಾಕೇಂದ್ರ ಹಾಗೂ ಸೆ.16 ರಂದು ಸಂ. 5 ಗಂಟೆಗೆ ಮೂಡುಗಿಳಿಯಾರು ಸ ಹಿ.ಪ್ರಾ.ಶಾಲೆ, ಸಂ. 6.30 ಕ್ಕೆ ಪಡುಕೆರೆ ಮಣೂರು ಉದ್ಭವ ಭಜನಾ ಮಂದಿರ ಮತ್ತು ರಾ.8 ಗಂಟೆಗೆ ಪಡುಕೆರೆ ಕೋಟತಟ್ಟು ಹಂದಟ್ಟು ಸಭಾಭವನದಲ್ಲಿ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Edited By : PublicNext Desk
Kshetra Samachara

Kshetra Samachara

10/09/2022 01:13 pm

Cinque Terre

1.01 K

Cinque Terre

0

ಸಂಬಂಧಿತ ಸುದ್ದಿ