ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದುರ್ಗ ಪಂಚಾಯತ್ ನಲ್ಲಿ "ಶ್ರೀ ಜಲದುರ್ಗ" ಸ್ವಾಮಿ ವಿವೇಕಾನಂದ ಯುವಕರ ಸಂಘ ರಚನೆ

ಕಾರ್ಕಳ : ತಾಲೂಕಿನ ದುರ್ಗ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದ ಯುವಕರ ಸಂಘ ರಚನೆ ಕುರಿತು ವಿಶೇಷ ಸಭೆಯು ಜರುಗಿತು. ಶ್ರೀ ಜಲದುರ್ಗ ಹೆಸರಿನಲ್ಲಿ 16 ರಿಂದ 29 ವಯಸ್ಸಿನ ಯುವಕರ ಸಂಘವನ್ನು ರಚನೆ ಮಾಡಲಾಯಿತು. ನೂತನ ಸಂಘದ ಅಧ್ಯಕ್ಷರಾಗಿ ಶಿವಪ್ರಸಾದ್ ಭಟ್,ಉಪಾಧ್ಯಕ್ಷರಾಗಿ ಯುವರಾಜ್,ಕಾರ್ಯದರ್ಶಿಯಾಗಿ ವಿಜೇಶ್ ಶೆಟ್ಟಿ ಹಾಗೂ ಖಜಾಂಚಿಯಾಗಿ ಕೀರ್ತನ್ ರವರು ಆಯ್ಕೆಯಾದರು.

ಪಂಚಾಯತ್ ಅಧ್ಯಕ್ಷ ಸತೀಶ್ ನಾಯಕ್ ಮಾತನಾಡಿ, ಸರಕಾರವು ಯುವಕರನ್ನು ಸ್ವ ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬಹಳಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು ಈ ಮೂಲಕ ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಲಿದೆ. ಇಂತಹ ಸಂಘಗಳನ್ನು ರಚಿಸಿ ಭವಿಷ್ಯದಲ್ಲಿ ಉತ್ತಮ ಚಟುವಟಿಕೆಗಳನ್ನು ಕೈಗೊಂಡಲ್ಲಿ ಸರಕಾರದಿಂದ ಸಹಾಯಧನವು ಲಭ್ಯವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಸುಶೀಲ, ಸದಸ್ಯರು ಗಳಾದ ದೇವಕಿ, ಉಮಾವತಿ, ಮಹೇಶ್ ರಾವ್, ರಾಜೇಶ್ ಗೋರೆ, ಸುಧಾಕರ ಪೂಜಾರಿ, ಅಭಿವೃದ್ಧಿ ಅಧಿಕಾರಿ ಮಂಜು, ಕಾರ್ಯದರ್ಶಿ ಸುಬ್ಬಯ್ಯ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

06/10/2022 08:20 pm

Cinque Terre

1.07 K

Cinque Terre

0

ಸಂಬಂಧಿತ ಸುದ್ದಿ