ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಐತಿಹಾಸಿಕ ಗಂಗಾರತಿಗೆ ಕಡಲ ಅಲೆಗಳು ಸಾಕ್ಷಿ

ಕಾಪು: ಕಾಪು ತಾಲೂಕಿನ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ದಸರಾ ಮಹೋತ್ಸವಕ್ಕೆ ನಿನ್ನೆ ರಾತ್ರಿ ತೆರೆ ಬಿದ್ದಿದೆ. ಆದರೆ ಕಾಪು ಕಡಲ ತೀರದಲ್ಲಿ ನವದುರ್ಗೆಯರಿಗೆ ಗಂಗಾವತಿ ನಡೆಸಿ, ಸಾವಿರಾರು ಜನರ ಸಮ್ಮುಖದಲ್ಲಿ ಜಲಸ್ತಂಭನ ಮಾಡಿದ್ದು ಕರಾವಳಿ ಮಟ್ಟಿಗೆ ಐತಿಹಾಸಿಕ ಕ್ಷಣ.

ಹೌದು, ದಕ್ಷಿಣ ಭಾರತದ ಪ್ರಸಿದ್ಧ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವನ್ನು ವೈಭವದಿಂದ ಆಚರಿಸಲಾಗಿತ್ತು. ನವ ದುರ್ಗೆಯರ ಮೂರ್ತಿಯನ್ನು 9 ದಿನ ಆರಾಧಿಸಿ, ತಡರಾತ್ರಿ ವಿಸರ್ಜನೆ ಮಾಡಲಾಯಿತು. ಸಮುದ್ರ ತೀರದಲ್ಲಿ ನವದುರ್ಗ ವಿಸರ್ಜನೆ ವಿಶೇಷವಾಗಿತ್ತು.

ರಾತ್ರಿ ಎರಡು ಗಂಟೆಯವರೆಗೂ ಕಾಪು ಕಡಲತೀರದವರೆಗೆ ನವ ದುರ್ಗೆಯರ ವೈಭವದ ಮೆರವಣಿಗೆ ನಡೆಯಿತು. ಅಲ್ಲಲ್ಲಿ ನಿಂತು ಜನ ದೇವರಿಗೆ ಪ್ರಾರ್ಥನೆ, ಪೂಜೆ ಸಲ್ಲಿಸಿದರು. ಕಾಪು ಕಡಲ ತೀರದಲ್ಲಿ ಸಾವಿರಾರು ಜನ ಭಕ್ತರ ನಡುವೆ ಸಾಲಾಗಿ ನವ ದುರ್ಗೆಯರ ಮೂರ್ತಿಯನ್ನು ಇಟ್ಟು ಗಂಗಾರತಿ ಸಲ್ಲಿಸಲಾಯಿತು.ಬಳಿಕ 9 ದೇವಿಯರನ್ನು ಏಕಕಾಲದಲ್ಲಿ ಜಲಸ್ತಂಭನ ಮಾಡಿದ್ದು ವಿಶೇಷವಾಗಿತ್ತು. ಉತ್ತರ ಭಾರತದಲ್ಲಿ ಪ್ರಸಿದ್ಧಿ ಪಡೆದ ನವರಾತ್ರಿ ಗಂಗಾರತಿ ,ಕರಾವಳಿಯಲ್ಲಿ ಅಷ್ಟಾಗಿ ಚಾಲ್ತಿಯಲ್ಲಿಲ್ಲ.ಆದರೆ ಭೋರ್ಗರೆವ ಕಡಲ ಕಿನಾರೆಯಲ್ಲಿ ನಡೆದ ಗಂಗಾರತಿಗೆ ಸಾವಿರಾರು ಭಕ್ತರು ಸಾಕ್ಷಿಯಾಗಿ ಪುಳಕಗೊಂಡರು.

Edited By : PublicNext Desk
Kshetra Samachara

Kshetra Samachara

06/10/2022 02:28 pm

Cinque Terre

1.45 K

Cinque Terre

0

ಸಂಬಂಧಿತ ಸುದ್ದಿ