ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ರಾಮಾಂಜಿಯವರಿಗೆ ಗಾಂಧಿ ಶಾಂತಿ ಪ್ರತಿಷ್ಠಾನದ "ವರ್ಷದ ವ್ಯಕ್ತಿ 2022" ಪ್ರಶಸ್ತಿ

ಉಡುಪಿ: ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ "ವರ್ಷದ ವ್ಯಕ್ತಿ 2022"ಪ್ರಶಸ್ತಿಯನ್ನು ನಮ್ಮ ಭೂಮಿ ರಾಯಭಾರಿ ರಾಮಾಂಜಿಯವರಿಗೆ ಪ್ರದಾನ ಮಾಡಲಾಯಿತು.

ರಾಮಾಂಜಿಯವರ ಮಾರ್ಗದರ್ಶಕರು ಹಾಗೂ ಅಂತಾರಾಷ್ಟ್ರೀಯ ದುಡಿಯುವ ಮಕ್ಕಳ ಹೋರಾಟಗಾರರು ಆಗಿರುವ ಎಂ.ಎಂ. ಗಣಪತಿಯವರು ರಾಮಾಂಜಿಯವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ಅವರನ್ನು ಸನ್ಮಾನಿಸಿದ ಗಾಂಧಿ ಪ್ರತಿಷ್ಠಾನಕ್ಕೆ ವಂದನೆಗಳನ್ನು ಸಲ್ಲಿಸಿದರು.ಅವರ ವಿದ್ಯಾ ಗುರು ವಸಂತಿ.ಎಸ್. ‌ರಾವ್ ಅವರು ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು.

ಉಪನ್ಯಾಸಕಿ ಶಮಾ ಅವರು ಅಭಿನಂದನಾ ಪತ್ರವನ್ನು ವಾಚಿಸಿದರು.ಡಾ.ಇಸ್ಮಾಯಿಲ್ ಅವರು ಪ್ರಾಸ್ತಾವಿಕ ಮಾತುಗಳನ್ನು ಹೇಳಿ ಎಲ್ಲರನ್ನು ಸ್ವಾಗತಿಸಿದರು.ಪ್ರೇಮ್ ಚಂದ್ ವಂದಿಸಿದರು. ಕಲ್ಲೂರು ನಾಗೇಶ್ ಅವರು ಕಾರ್ಯ ಕ್ರಮವನ್ನು ನಿರೂಪಿಸಿದರು.

ಬಲ್ಮಠದ ಮಹಿಳಾ ಸರಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕಿ ಡಾ.ಶೈಲಾ ಅವರ ಮಾರ್ಗದರ್ಶನ ದಲ್ಲಿ ಅವರ ವಿದ್ಯಾರ್ಥಿಗಳು ಮತ್ತು ರಾಮಕೃಷ್ಣ ಆಶ್ರಮದಲ್ಲಿದ್ದು ನಗರದ ಕಾಸಿಯಾ ಪ್ರೌಢಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಗೂ ಗಾಂಧಿ ಭಜನೆಗಳನ್ನು ಹಾಡಿದರು.

Edited By : PublicNext Desk
Kshetra Samachara

Kshetra Samachara

04/10/2022 08:08 am

Cinque Terre

1.31 K

Cinque Terre

0

ಸಂಬಂಧಿತ ಸುದ್ದಿ