ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಟಾನದ ಅಧ್ಯಕ್ಷ ವಿಶ್ವನಾಥ ಶೆಣೈ ಅವರು ವಿದ್ಯಾರ್ಥಿನಿಯೊಬ್ಬರ ಶೈಕ್ಷಣಿಕ ಸಹಾಯಕ್ಕಾಗಿ ಹಾಗೂ ಮಣಿಪಾಲದ ವ್ಯಕ್ತಿಯೊಬ್ಬರ ವೈದ್ಯಕೀಯ ಚಿಕಿತ್ಸೆಗೆ ಸಹಾಯಧನದ ನೆರವು ನೀಡಿದ್ದಾರೆ.
ಕೊಡುಗೈ ದಾನಿ ವಿಶ್ವನಾಥ ಶೆಣೈ ಅವರು ವಿದ್ಯಾರ್ಥಿನಿಯ ಶೈಕ್ಷಣಿಕ ನೆರವಿಗಾಗಿ 10,000 ರೂ. ಸಹಾಯಧನ, ಹಾಗೂ ವಿದ್ಯಾಭ್ಯಾಸಕ್ಕಾಗಿ ಸಹಾಯ ಧನದ ಹತ್ತು ಸಾವಿರ ರೂ. ಚೆಕ್ ನ್ನು ವಿತರಿಸಿದರು.
ಅವರು ರಾಮಪುರದ ಅಭಿಮಾನ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಡೆಸುತ್ತಿರುವ ಮುದ್ದು ಕೃಷ್ಣ ಸ್ಪರ್ಧೆಗೆ ಸಂಸ್ಥೆ ವತಿಯಿಂದ 25,000 ದೇಣಿಗೆ ನೀಡಿದ್ದು ಅವರನ್ನು ಅಭಿಮಾನ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅಭಿನಂದಿಸಿದರು.
ಈ ಸಂದರ್ಭದಲ್ಲಿ ರವಿರಾಜ್ ಎಚ್ ಪಿ, ಪ್ರಶಾಂತ್ ಕಾಮತ್ ಕುಕ್ಕಿಕಟ್ಟೆ, ವಿಘ್ನೇಶ್ವರ ಅಡಿಗ, ಅಭಿಮಾನ್ ಸ್ಪೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷ ಅಶೋಕ ಶೆಟ್ಟಿಗಾರ್, ಅಧ್ಯಕ್ಷ ಪ್ರಕಾಶ ಆಚಾರ್ಯ ಅವರು ಉಪಸ್ಥಿತರಿದ್ದರು.
Kshetra Samachara
14/09/2022 04:40 pm