ಉಡುಪಿ: ಬಿದ್ಕಲ್ಕಟ್ಟೆಯಲ್ಲಿ ನಡೆದ ಜಿಲ್ಲಾ ಮಟ್ಟದ ಅಂತರ್ ಶಾಲಾ ಕಬಡ್ಡಿ ಪಂದ್ಯಾಟದ ಅಂಡರ್ 14 ವಿಭಾಗದಲ್ಲಿ ಅಲೆವೂರು ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಬಹುಮಾನ ಗೆದ್ದು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತಂಡದಲ್ಲಿ ಸಂಜನಾ, ಗ್ರೀಷ್ಮಾ, ನಿಯತಿ, ಕೀರ್ತನಾ ನಾಯ್ಕ, ತನ್ವಿ ಎಸ್. ಅಂಚನ್, ಮನಸ್ವಿನಿ ನಾಯಕ್, ರಮ್ಯಾ, ಕೀರ್ತನಾ ಶೇರಿಗಾರ್, ಅನ್ವಿತಾ ನಾಯ್ಕ, ಚಿನ್ಮಯಿ ಪಿ. ಶೆಟ್ಟಿ, ಸಿಂಚನಾ ಎಸ್. ಭಂಡಾರಿ ಹಾಗೂ ರಶ್ವಿತಾ ಇದ್ದರು. ಶಾಂತಿನಿಕೇತನ ಶಾಲಾ ಸಹಾಯಕ ಮುಖ್ಯೋಪಾಧ್ಯಾಯಿನಿ ಸುಮನಾ ಬಿ.ಆರ್.,ದೈಹಿಕ ಶಿಕ್ಷಣ ಶಿಕ್ಷಕ ಶರತ್ ಎಚ್.ಎಸ್. ಅಭಿನಂದಿಸಿದ್ದಾರೆ.
Kshetra Samachara
09/09/2022 07:39 pm