ಕುಂದಾಪುರ: ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಂ.ಎಂ. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್. ಆಚಾರ್ಯ ಸ್ಮಾರಕ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಹಟ್ಟಿಯಂಗಡಿಯಲ್ಲಿ ನಡೆದ ತಾಲೂಕು ಮಟ್ಟದ ಸಾಂಸ್ಕ್ರತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿ ಸಂಸ್ಥೆಗೆ ಹೆಮ್ಮೆ ತಂದಿರುತ್ತಾರೆ.
ವಿ.ಕೆ.ಆರ್. ಆಚಾರ್ಯ ಸ್ಮಾರಕ ಆಂಗ್ಲ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಅನುಷ್ ಎಸ್. ನಾಯಕ್ ಕ್ವಿಜ್ ವಿಭಾಗದಲ್ಲಿ ಪ್ರಥಮ, ಚಿರಂತನ್ ಇಂಗ್ಲೀಷ್ ಉಕ್ತಲೇಖನದಲ್ಲಿ ದ್ವಿತೀಯ, ನಮಿತಾ, ಕ್ಷಮಾ, ಸುನೀತಾ ಶಾನುಬಾಗ್, ಗಾರ್ಗಿದೇವಿ, ಬ್ರಾಹ್ಮಿ ಉಡುಪ., ಶ್ರೇಯಾ ಭಜನಾ ಸ್ಪರ್ಧೆಯಲ್ಲಿ ದ್ವಿತೀಯ , ಲಂಕೇಶ್ ಏಕಪಾತ್ರಾಭಿನಯದಲ್ಲಿ, ವಿಧಾತ್ರಿ ವೈದ್ಯ ಭಾವಗೀತೆಯಲ್ಲಿ , ಶ್ರೀಧನ್ ಚೆಸ್ ನಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಹಾಗೆಯೇ ಎಚ್. ಎಂ. ಎಂ. ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಶ್ರಾವ್ಯ ಚೆಸ್ ನಲ್ಲಿ ಪ್ರಥಮ, ಕೌಸ್ತುಭ್ ಉಡುಪ ಭಾವಗೀತೆಯಲ್ಲಿ ದ್ವಿತೀಯ, ಅಲನ್ ಕೆ. ಬಿಜೋಯ್ ಕ್ವಿಜ್ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಅತಿ ಹೆಚ್ಚು ಸ್ಪರ್ಧಾಳುಗಳನ್ನು ಕಳುಹಿಸಿದ ಶಾಲಾ ಪ್ರಶಸ್ತಿ ಯನ್ನು ಕೂಡ ಎಚ್.ಎಮ್.ಎಮ್. ಮತ್ತು ವಿ.ಕೆ ಆರ್. ತನ್ನದಾಗಿಸಿಕೊಂಡಿತು.
ಸಂಸ್ಥೆಯ ಪ್ರಾಂಶುಪಾಲರಾದ ಚಿಂತನಾ ರಾಜೇಶ್ ಮಾರ್ಗದರ್ಶನ ಹಾಗೂ ಸಹ ಶಿಕ್ಷಕರ ಸಹಕಾರದೊಂದಿಗೆ ಸ್ಪರ್ಧಿಸಿ ವಿಜೇತರಾದ ವಿದ್ಯಾರ್ಥಿಗಳನ್ನು ಉಪ ಪ್ರಾಂಶುಪಾಲರು ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶುಭಾ ಕೆ. ಎನ್. , ಪ್ರೌಢ ಶಾಲಾ ಸಹಾಯಕ ಮುಖ್ಯ ಶಿಕ್ಷಕರಾದ ಚಂದ್ರಶೇಖರ್ ಶೆಟ್ಚಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಜಗದೀಶ್ ಆಚಾರ್ ಸಾಸ್ತಾನ , ಸಹಾಯಕ ಮುಖ್ಯ ಶಿಕ್ಷಕಿ ಕವಿತಾ ಭಟ್ , ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಲತಾ ಜಿ. ಭಟ್ ಅಭಿನಂದಿಸಿದರು.
Kshetra Samachara
16/08/2022 09:01 pm