ಉಡುಪಿ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್, ನಿಕ್ಕಾನ್ ಇಂಡಿಯಾ ಮತ್ತು ಪ್ರವಾಸೋದ್ಯಮ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ರಾಜ್ಯ ಮಟ್ಟದ ಕಲರ್ಸ್ ಅಫ್ ಶ್ರೀಕೃಷ್ಣ ಲೀಲೋತ್ಸವ ಛಾಯಾಚಿತ್ರ ಸ್ಪರ್ಧೆ ಆಯೋಜಿಸಲಾಗಿದೆ. ವಿಜೇತರಿಗೆ ಪ್ರಥಮ 10 ಸಾವಿರ, ದ್ವಿತೀಯ 5 ಸಾವಿರ, ತೃತೀಯ 3 ಸಾವಿರ ಹಾಗೂ 5 ಸಮಾಧಾನಕರ ಬಹುಮಾನ, ವಿಶೇಷ ಉಡುಗೊರೆ ದೊರೆಯಲಿದೆ.
ನಿಯಮಗಳು: ಎ4 ಅಳತೆಯ ಗರಿಷ್ಠ 4 ಛಾಯಾಚಿತ್ರಗಳನ್ನು ಕಳುಹಿಸಬಹುದು. ಮೊಬೈಲ್‌ನಲ್ಲಿ ತೆಗೆದ ಛಾಯಾಚಿತ್ರ, ಪೋಟೋಶಾಪ್‌ನಲ್ಲಿ ತಿರುಚಲಾದ ಮತ್ತು ವಾಟರ್ ಮಾರ್ಕ್ ಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. ಒಂದು ಬಾರಿ ನೋಂದಣಿಯಾದ ಛಾಯಾಚಿತ್ರಗಳನ್ನು ಬದಲಾಯಿಸಲು ಅವಕಾಶವಿರುವುದಿಲ್ಲ.
ಸ್ಪರ್ಧೆಯಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಅವಕಾಶ. ಇ-ಮೇಲ್ ಮೂಲಕ ಕಳುಹಿಸುವಾಗ ಭಾವಚಿತ್ರ, ಹೆಸರು, ವಿಳಾಸ, ದೂರವಾಣಿ ಹಾಗೂ ನೋಂದಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು. ಛಾಯಾಚಿತ್ರವನ್ನು ಕಳುಹಿಸಲು ಆ. 31 ಕೊನೆಯ ದಿನ. ಸೆ.9ರಂದು ಫಲಿತಾಂಶ ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ 72041 46368 ಸಂಪರ್ಕಿಸಬಹುದು.
Kshetra Samachara
08/08/2022 12:44 pm