ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಭಾರತ ಸೇವಾ ದಳ ಜಿಲ್ಲಾಧ್ಯಕ್ಷರಾಗಿ ಅಂಡಾರು ದೇವಿ ಪ್ರಸಾದ್ ಶೆಟ್ಟಿ ಆಯ್ಕೆ

ಉಡುಪಿ : ಕರ್ನಾಟಕ ಸರಕಾರದ ಅಂಗ ಸಂಸ್ಥೆಯಾದ ಉಡುಪಿ ಜಿಲ್ಲಾ ಭಾರತ ಸೇವಾ ದಳ ಸಂಸ್ಥೆಗೆ 2022-27ರ ಸಾಲಿನ ಅಧ್ಯಕ್ಷರಾಗಿ ಉಡುಪಿ ಜಿಲ್ಲಾ ಕೈಗಾರಿಕೋದ್ಯಮ ಮತ್ತು ವಾಣಿಜ್ಯ ಸಂಸ್ಥೆಯ ಅಧ್ಯಕ್ಷ ಅಂಡಾರು ದೇವಿ ಪ್ರಸಾದ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಈ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಉಡುಪಿ ನಗರಸಭಾ ಸದಸ್ಯ ಗಿರೀಶ್ ಎಂ.ಅಂಚನ್ ಹಾಗೂ ರಾಜ್ಯ ಕಾರ್ಯಕಾರಿ ಸದಸ್ಯರಾಗಿ ಆರೂರು ತಿಮ್ಮಪ್ಪ ಶೆಟ್ಟಿ, ಕಾರ್ಯದರ್ಶಿಯಾಗಿ ಮುಖ್ಯ ಶಿಕ್ಷಕರಾದ ಸಂಜೀವ ದೇವಾಡಿಗ ಕಾರ್ಕಳ ಹಾಗೂ ಖಜಾಂಚಿಯಾಗಿ ನಿವೃತ್ತ ಶಿಕ್ಷಕ ಹೆರಾಲ್ಡ್ ಡಿಸೋಜಾ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮಾಜಿ ಶಾಸಕ ಯು.ಆರ್.ಸಭಾಪತಿ, ಸುವರ್ಧನ ನಾಯಕ್, ಮಹಾಬಲ ಕುಂದರ್, ಸುಬ್ರಹ್ಮಣ್ಯ ಬಾಸ್ತಿ ಉಡುಪಿ, ಶ್ಯಾಮಲ ಸುಧಾಕರ, ಎಸ್.ದಿನಕರ್ ಶೆಟ್ಟಿ, ನಿತ್ಯಾನಂದ ಶೆಟ್ಟಿ ಹಾರಾಡಿ, ಗಣೇಶೆಟ್ಟಿ ಮಂದಾರ್ತಿ, ಶಿಕ್ಷಕ ಸದಸ್ಯರಾಗಿ ಕೃಷ್ಣ ಮೊಯ್ಲಿ ಕಾರ್ಕಳ, ಜಯಲಕ್ಷ್ಮಿ ಬಿ.ಸಿ. ಆಯ್ಕೆಗೊಂಡಿದ್ದಾರೆಂದು ಭಾರತ ಸೇವಾ ದಳ ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾ ಸಂಘಟಕ ಫಕೀರ್ ಗೌಡ ಹಳಮನಿ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

30/07/2022 06:06 pm

Cinque Terre

826

Cinque Terre

0

ಸಂಬಂಧಿತ ಸುದ್ದಿ