ಕಾಪು: ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕಾಪು ತಾಲೂಕಿನ ಎಲ್ಲ ಗ್ರಾಮ ಪಂಚಾಯತ್ ಮಟ್ಟದ ಸಂಜೀವಿನಿ ಒಕ್ಕೂಟದ ಆಯ್ದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಇಂಚರ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ ರಚನೆಗೊಂಡಿತು.
ಒಕ್ಕೂಟದ ಅಧ್ಯಕ್ಷರಾಗಿ ಗೀತಾ ವಾಗ್ಳೆ-,ಶಿರ್ವ, ಉಪಾಧ್ಯಕ್ಷರಾಗಿ ಪೂರ್ಣಿಮಾ,ಇನ್ನಂಜೆ, ಕಾರ್ಯದರ್ಶಿಯಾಗಿ ಶಾರದೇಶ್ವರಿ,ಕುತ್ಯಾರು,ಜೊತೆ ಕಾರ್ಯದರ್ಶಿಯಾಗಿ ಜಯಶ್ರೀ,ಪಡುಬಿದ್ರಿ ಹಾಗೂ ಕೋಶಾಧಿಕಾರಿಯಾಗಿ ಲಕ್ಷ್ಮಿ ತಂತ್ರಿ, ಬೆಳ್ಳೆ ಆಯ್ಕೆಯಾದರು.
ಕಾಪು ತಾಲೂಕು ಪಂಚಾಯತ್ ನ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ರಕಾಶ್ ನೂತನ ತಾಲೂಕು ಒಕ್ಕೂಟವನ್ನು ಉದ್ಘಾಟಿಸುವ ಮೂಲಕ ಒಕ್ಕೂಟದ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಸಹಾಯಕ ಯೋಜನಾಧಿಕಾರಿ ಜೇಮ್ಸ್ ಡಿಸಿಲ್ವ ತಾಲೂಕು ಒಕ್ಕೂಟದ ಗುರಿ, ಉದ್ದೇಶ ಮತ್ತು ಪದಾಧಿಕಾರಿಗಳ ಜವಾಬ್ದಾರಿಗಳನ್ನು ವಿವರಿಸಿದರು. ಎನ್.ಆರ್.ಎಲ್.ಎಂ.ನ ಜಿಲ್ಲಾ ವ್ಯವಸ್ಥಾಪಕ ಪ್ರಭಾಕರ್ ಆಚಾರ್ ಸಾಂದರ್ಭಿಕವಾಗಿ ಮಾತನಾಡಿದರು. ಜಿಲ್ಲಾ ವ್ಯವಸ್ಥಾಪಕಿ ನವ್ಯಾ ಪ್ರಸ್ತಾವನೆಗೈದು, ವಲಯ ಮೇಲ್ವಿಚಾರಕಿ ಸುಜಾತಾ ವಂದಿಸಿದರು. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಕೃಷ್ಣ ಸ್ವಾಗತಿಸಿ, ಕಾರ್ಯಕ್ರಮ ಸ ನಿರೂಪಿಸಿದರು.
Kshetra Samachara
22/06/2022 09:20 pm