ಉಡುಪಿ: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ- ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ ರಚನೆ, ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವು ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜರಗಿತು.
ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಬಾಬು ಎಂ. ಶುಭಹಾರೈಸಿದರು. ಸ್ವರ್ಣ ಸಂಜೀವಿನಿ ಉಡುಪಿ ತಾಲೂಕು ಮಟ್ಟದ ನೂತನ ಒಕ್ಕೂಟವನ್ನು ಉದ್ಘಾಟಿಸಲಾಯಿತು. ಒಕ್ಕೂಟದ ನೂತನ ಅಧ್ಯಕ್ಷರಾಗಿ ಲತಾ ಅಶೋಕ್ ಬಡಾನಿಡಿಯೂರು, ಕಾರ್ಯದರ್ಶಿಯಾಗಿ ಸುಕನ್ಯಾ ಶೆಟ್ಟಿ ತೆಂಕನಿಡಿಯೂರು, ಕೋಶಾಧಿಕಾರಿಯಾಗಿ ಮಾಲತಿ ನಾಯ್ಕ, ಉಪಾಧ್ಯಕ್ಷರಾಗಿ ಪ್ರೇಮಲತಾ ಬೊಮ್ಮರಬೆಟ್ಟು, ಸಹ ಕಾರ್ಯದರ್ಶಿ ಯಾಗಿ ಮೀರಾ ಕೋಟ್ಯಾನ್ ಕಲ್ಯಾಣಪುರ ಆಯ್ಕೆಯಾದರು.
ಜಿಪಂ ಸಹಾಯಕ ಯೋಜನಾಧಿಕಾರಿ ಜೇಮ್ಸ್ ಡಿಸಿಲ್ವಾ ತಾಲೂಕು ಒಕ್ಕೂಟದ ಉದ್ದೇಶ, ಗುರಿ ಹಾಗೂ ನೂತನ ಪದಾಧಿಕಾರಿಗಳ ಜವಾಬ್ದಾರಿಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ತಾಪಂ ಸಹಾಯಕ ನಿರ್ದೇಶಕಿ ವಿಜಯಾ, ಎನ್‌ಆರ್‌ಎಲ್‌ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ ಆಚಾರ್, ಏಕ ವ್ಯಕ್ತಿ ಸಮಾಲೋಚಕ ಪಾಂಡುರಂಗ ಉಪಸ್ಥಿತರಿದ್ದರು.
Kshetra Samachara
04/06/2022 06:46 pm