ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ: ಕೆಎಂಸಿ ಆಸ್ಪತ್ರೆಯ ಶುಶ್ರೂಷಕಿ ಅನಿತಾ ಪ್ರಸಿಲ್ಲಾ ಕ್ಯಾಸ್ತಲಿನೊ ಅವರಿಗೆ ಅತ್ಯುತ್ತಮ ನರ್ಸ್‌ ರಾಜ್ಯ ಪ್ರಶಸ್ತಿ

ಮಣಿಪಾಲ: ವಿಶ್ವ ದಾದಿಯರ ದಿನಾಚರಣೆಯ ಪ್ರಯುಕ್ತ ಮುಖ್ಯಮಂತ್ರಿಗಳ ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಜರಗಿದ ಕರ್ನಾಟಕ ರಾಜ್ಯ ಮಟ್ಟದ ಫ್ಲಾರೆನ್ಸ್‌ ನೈಟಿಂಗೇಲ್‌ ಶುಶ್ರೂಷಾ ಅಧಿಕಾರಿಗಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ಶುಶ್ರೂಷಕಿ ಶಿರ್ವ ಮಾಣಿಪಾಡಿಯ ಅನಿತಾ ಪ್ರಸಿಲ್ಲಾ ಕ್ಯಾಸ್ತಲಿನೊ ಅವರಿಗೆ ಅತ್ಯುತ್ತಮ ನರ್ಸ್‌ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ| ಕೆ. ಸುಧಾಕರ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವಿಭಾಗದ ಮುಖ್ಯ ಕಾರ್ಯದರ್ಶಿ ಅನಿಲ್‌ ಕುಮಾರ್‌ ಟಿ.ಕೆ., ಇಲಾಖೆಯ ಆಯುಕ್ತ ರಣದೀಪ್‌ ಡಿ., ಫ್ಲಾರೆನ್ಸ್‌ ನೈಟಿಂಗೇಲ್‌ ಅವಾರ್ಡ್‌ ಸಮಿತಿಯ ಚೆೇರ್ಮೇನ್‌ ಐವನ್‌ ನಿಗ್ಲಿ ಉಪಸ್ಥಿತರಿದ್ದರು.

ಅನಿತಾ ಮಣಿಪಾಲ ಕೆಎಂಸಿಯಲ್ಲಿ ಜನರಲ್‌ ನರ್ಸಿಂಗ್‌, ಪೋಸ್ಟ್‌ ಬಿಎಸ್ಸಿ ನರ್ಸಿಂಗ್‌ ಶಿಕ್ಷಣ ಪಡೆದು 16 ವರ್ಷಗಳಿಂದ ಶುಶ್ರೂಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಶಿರ್ವ ಮಾಣಿಪಾಡಿ ವಿಲಿಯಂ ಕ್ಯಾಸ್ತಲಿನೊ ಜ್ಯೂಲಿಯೆಟ್‌ ಕ್ಯಾಸ್ತಲಿನೊ ದಂಪತಿಯ ಪುತ್ರಿ.

Edited By : PublicNext Desk
Kshetra Samachara

Kshetra Samachara

03/06/2022 03:59 pm

Cinque Terre

1.4 K

Cinque Terre

0

ಸಂಬಂಧಿತ ಸುದ್ದಿ