ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ವಿದ್ಯಾಪೋಷಕ್ ನಿಂದ ಬಡ ವಿದ್ಯಾರ್ಥಿಗಳಿಗೆ ಮನೆ ಹಸ್ತಾಂತರ

ಉಡುಪಿ: ಯಕ್ಷಗಾನ ಕಲಾರಂಗ, ವಿದ್ಯಾಪೋಷಕ್ ವತಿಯಿಂದ ಫಲಾನುಭವಿ ಬಡ ವಿದ್ಯಾರ್ಥಿಗಳಿಗೆ ನಿರ್ಮಿಸಿಕೊಡಲಿರುವ ಒಟ್ಟು ಐದು ಮನೆಗಳ ಪೈಕಿ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ಪ್ರಾಯೋಜಕತ್ವದ ಎರಡು ಮನೆಗಳ ಉದ್ಘಾಟನೆ ಇಂದು ನೆರವೇರಿತು.

ದ್ವಿತೀಯ ಪಿಯುಸಿಯಲ್ಲಿ ಓದುತ್ತಿರುವ ಗಂಗೊಳ್ಳಿಯ ಸ್ವಾತಿ ಖಾರ್ವಿ ಹಾಗೂ ದ್ವಿತೀಯ ಬಿಕಾಂ ಮತ್ತು ದ್ವಿತೀಯ ಪಿಯುಸಿಯಲ್ಲಿ ಕಲಿಯುತ್ತಿರುವ ವಡ್ಡರ್ಸೆಯ ಚೈತ್ರಾ ಮತ್ತು ರಕ್ಷಿತಾ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿ ಗಳಾಗಿದ್ದು, ಇವರಿಗೆ ಸಂಸ್ಥೆ ನಿರ್ಮಿಸಿ ಕೊಟ್ಟ ಮನೆಗಳನ್ನು ಇಂದು ಉದ್ಘಾಟಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.

ಗಂಗೊಳ್ಳಿಯ ಮನೆಯ ಉದ್ಘಾಟನೆಯನ್ನು ಬೈಂದೂರಿನ ಶಾಸಕರಾ ಬಿ.ಎಂ. ಸುಕುಮಾರ ಶೆಟ್ಟಿ ನೆರವೇರಿಸಿ ವಿದ್ಯಾಪೋಷಕ್‌ನ ಅತ್ಯಂತ ಹೆಚ್ಚಿನ ಫಲಾನುಭವಿ ವಿದ್ಯಾರ್ಥಿಗಳು ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿದ್ದಾರೆ ಎಂದು ತಿಳಿದು ಸಂತೋಷವಾಯಿತು. ಸಂಸ್ಥೆಯ ಚಟುವಟಿಕೆಗಳಿಗೆ ಸದಾ ತನ್ನ ಬೆಂಬಲ ವಿರುವುದಾಗಿ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಸರಸ್ವತಿ ವಿದ್ಯಾಲಯದ ಸಂಚಾಲಕರಾದ ಗಣೇಶ್ ಕಾಮತ್ ಉಪಸ್ಥಿತರಿದ್ದು, ಸಂಸ್ಥೆಯ ಚಟುವಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ವಡ್ಡರ್ಸೆಯ ಮನೆಯ ಉದ್ಘಾಟನೆ ಸಂದರ್ಭದಲ್ಲಿ ಅತಿಥಿಗಳಾಗಿ ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ ಎಚ್. ಶ್ರೀಧರ ಹಂದೆ ಉಪಸ್ಥಿತರಿದ್ದು, ಇದು ನಿಜಾರ್ಥದಲ್ಲಿ ಯಕ್ಷಗಾನ ಕಲಾರಂಗ ಮಾಡುವ ಕೆಲಸ ದೇವರು ಮೆಚ್ಚುವ ಕೆಲಸ. ಬಡವರ ಕಣ್ಣೀರೊರೆಸುವ ಈ ಕಾರ್ಯಕ್ಕೆ ಶ್ರೇಯಸ್ಸಾಗಲಿ ಎಂದು ಶುಭ ಹಾರೈಸಿದರು.

Edited By : PublicNext Desk
Kshetra Samachara

Kshetra Samachara

23/05/2022 08:46 pm

Cinque Terre

1.29 K

Cinque Terre

0

ಸಂಬಂಧಿತ ಸುದ್ದಿ