ಮಲ್ಪೆ: ಮಲ್ಪೆ ಮತ್ತು ಉಡುಪಿಯಲ್ಲಿ ಯಾರೇ ನೀರಿಗೆ ಬಿದ್ದರೂ ,ಮಲ್ಪೆ ಕಡಲಲ್ಲಿ ದುರಂತ ಸಂಭವಿಸಿದರೂ ತಕ್ಷಣ ನೆರವಿಗೆ ಧಾವಿಸುವವರು ,ಆಪದ್ಭಾಂಧವ ಈಶ್ವರ್ ಮಲ್ಪೆ.ಹೀಗೆ ಪರೋಪಕಾರವನ್ನೇ ಬದುಕಾಗಿಸಿಕೊಂಡಿರುವ ಈಶ್ವರ್ ಮಲ್ಪೆಗೆ ಇವತ್ತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸನ್ಮಾನಿಸಿ ಗೌರವಿಸಿದ್ದಾರೆ.
ಜೊತೆಗೆ ಇವತ್ತು ಇವರ 47 ನೇ ಹುಟ್ಟುಹಬ್ಬವೂ ಹೌದು.ಈ ಹಿನ್ನೆಲೆಯಲ್ಲಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಠಾಣಾಧಿಕಾರಿಯಾದ ಶಕ್ತಿವೇಲು ಅವರ ನೇತೃತ್ವದಲ್ಲಿಹುಟ್ಟುಹಬ್ಬವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಲ್ಪೆ ಪೊಲೀಸ್ ಠಾಣೆಯ ಸಿಬ್ಬಂದಿಗಳು, ಈಶ್ವರ್ ಮಲ್ಪೆ ಅವರ ಧರ್ಮಪತ್ನಿ ಶ್ರೀಮತಿ ಗೀತಾ ಹಾಗೂ ಸತ್ಯದ ತುಳುವೆರ್ ಉಡುಪಿ- ಮಂಗಳೂರು ಸಂಸ್ಥೆಯ ಸಂಸ್ಥಾಪಕರಾದ ಪ್ರವೀಣ್ ಕುರ್ಕಾಲು ಉಪಸ್ಥಿತರಿದ್ದು ಶುಭಹಾರೈಸಿದರು.
Kshetra Samachara
21/05/2022 01:42 pm