ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಾತು, ಧಾತು ಒಂದಾಗುವ ಕಲೆ ಸಂಗೀತ; ಎಸ್.ದಿವಾಕರ್

ಉಡುಪಿ: ಮಾತು, ಧಾತು ಒಂದಾಗುವ ಕಲೆ ಸಂಗೀತ ಎಂದು ಖ್ಯಾತ ವಿಮರ್ಶಕ ಎಸ್ ದಿವಾಕರ್ ಹೇಳಿದ್ದಾರೆ.

ಅವರು ಈ ವರ್ಷದ ಎ.ಈಶ್ವರಯ್ಯ ಸ್ಮಾರಕ 'ಕಲಾಪ್ರವೀಣ' ಪ್ರಶಸ್ತಿಯನ್ನು ರಾಗಧನ ಸಂಸ್ಥೆಯ ಮಹಾಸಭೆಯ ಸಂದರ್ಭದಲ್ಲಿ ಪರ್ಕಳದ ಸರಿಗಮ ಭಾರತಿ ವೇದಿಕೆಯಲ್ಲಿ ಸ್ವೀಕರಿಸಿ ಮಾತನಾಡುತ್ತಿದ್ದರು. ಕಲೆಗಳು ಅಸ್ತವ್ಯಸ್ಥವಾದ ಜೀವನಕ್ಕೆ ಒಂದು ಸುವ್ಯವಸ್ಥೆಯನ್ನು ತಂದು ಕೊಡುವ ಸಾಧನಗಳು. ಜೀವನ ಒಂದು ಪ್ರವಾಹ ಇದ್ದ ಹಾಗೆ. ಕಲೆಗಳು ಜೀವನದ ಕೆಲವು ಘಟ್ಟಗಳಲ್ಲಿ, ಕೆಲವು ತುಣುಕುಗಳನ್ನು, ಅದಕ್ಕೊಂದು ಸ್ವರೂಪ, ಸಂವೇದನೆಯನ್ನು ನೀಡಿ ನಮ್ಮ ಮನಸ್ಸನ್ನು ಸೆಳೆಯುತ್ತವೆ. ಕಲೆಗಳ ಬಗ್ಗೆ ಆಸಕ್ತಿಯಿಂದ ಮನುಷ್ಯ ಹೆಚ್ಚು ಸುಸಂಸ್ಕೃತನಾಗುತ್ತಾನೆ. ನಮ್ಮ ಅಂತರಂಗದ ಸಂಪನ್ನತೆ, ನಾವು ಕಲಾಭಿಮಾನಿಗಳಾಗಿದ್ದಾಗ ಹೆಚ್ಚುತ್ತೆ. ಕಲೆಗಳು ಜೀವನದ ಹೃದಯವುಳ್ಳ ದಾರಿಗಳು, ಆ ದಾರಿಯ ಆಯ್ಕೆಯಿಂದ ಜೀವನ ಸುಗಮವಾಗುತ್ತದೆ. ಸಂಗೀತ ಎಂಬುದು ಶುದ್ಧ ಕಲೆ. ಬೇರೆ ಎಲ್ಲಾ ಕಲೆಗಳೂ ಸಂಗೀತದ ಮಟ್ಟವನ್ನು ಮುಟ್ಟಲು ಹೆಣಗಾಡುತ್ತವೆ ಎಂದು ಅಭಿಪ್ರಾಯ ಪಟ್ಟರು. ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಕಲಾಭಿಮಾನ ಕಡಿಮೆಯಾಗುತ್ತಿರುವ ಬಗ್ಗೆ ತಮ್ಮ ಕಳವಳವನ್ನೂ ಅವರು ವ್ಯಕ್ತಪಡಿಸಿದರು.

ಡಾ.ಮಹಾಬಲೇಶ್ವರ ರಾವ್ ಅವರು, ಎಸ್.ದಿವಾಕರ್ ಅವರನ್ನು ಕವಿಯಾಗಿ, ಅನುವಾದಕರಾಗಿ, ಸಂಪಾದಕರಾಗಿ, ಸಂಗೀತ ವಿಮರ್ಶಕರಾಗಿ ಸಮಗ್ರವಾಗಿ ಪರಿಚಯಿಸಿ, ಅಭಿನಂದಿಸಿದರು. ಇನ್ನೋರ್ವ ಅತಿಥಿ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡಕ ಅವರು ಪ್ರಶಸ್ತಿ ವಿತರಿಸಿ, ಎಸ್.ದಿವಾಕರ್ ಅವರ ಸಣ್ಣ ಕತೆಗಳ ಭಾಷಾಂತರ ಹಾಗೂ ಸಂಗೀತ ವಿಮರ್ಶೆಯ ಬಗ್ಗೆ ಬೆಳಕು ಚೆಲ್ಲಿದರು.

ನಂತರ, ಅನಾರೋಗ್ಯ ನಿಮಿತ್ತ, ಎಸ್ ದಿವಾಕರ್ ಅವರ ಭಾಷಣದ ತುಣುಕನ್ನು ಸಭಿಕರು ಆಲಿಸಿದರು.

ಶ್ರೀಕೃಷ್ಣಯ್ಯ ಅನಂತಪುರ ಮತ್ತು ರಾಗಧನದ ಅಧ್ಯಕ್ಷ ಡಾ. ಶ್ರೀಕಿರಣ ಹೆಬ್ಬಾರ್, ಎ.ಈಶ್ವರಯ್ಯನವರ ಒಡನಾಟದ ಸನ್ನಿವೇಶಗಳನ್ನು ಹಂಚಿಕೊಂಡರು. ಕಾರ್ಯದರ್ಶಿ ಉಮಾಶಂಕರಿ ಸ್ವಾಗತಿಸಿ, ರಾಘವೇಂದ್ರ ಆಚಾರ್ಯ ವಂದಿಸಿದರು. ಶಿಲ್ಪಾ ಜೋಷಿ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಬೆಂಗಳೂರಿನ ಅದಿತಿ ಪ್ರಹ್ಲಾದ್ ಅವರ ಸಂಗೀತ ಕಛೇರಿ ನಡೆಯಿತು. ಪಿಟೀಲಿನಲ್ಲಿ ತನ್ಮಯಿ ಉಪ್ಪಂಗಳ, ಮೃದಂಗದಲ್ಲಿ ಡಾ. ಬಾಲಚಂದ್ರ ಆಚಾರ್ಯ ಸಹಕರಿಸಿದರು.

Edited By : PublicNext Desk
Kshetra Samachara

Kshetra Samachara

17/05/2022 02:24 pm

Cinque Terre

408

Cinque Terre

0

ಸಂಬಂಧಿತ ಸುದ್ದಿ