ಬ್ರಹ್ಮಾವರ: ಉಡುಪಿ ಜಿಲ್ಲೆ ಬ್ರಹ್ಮಾವರ ಸಮೀಪದ ಹಂಗಾರಕಟ್ಟೆ ಶ್ರೀ ಮಠ ಬಾಳೆಕುದ್ರು ವಿಜಯಗೋಪುರ ಹಾಗೂ ಗುರುಭವನ, ಭೋಜನಶಾಲೆ ಲೋಕಾರ್ಪಣೆ ಕಾರ್ಯಕ್ರಮ ನಾಳೆ ವೇದ ಕೃಷಿಕ ಬ್ರಹ್ಮಶ್ರೀ ನಿತ್ಯಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಈ ಕಾರ್ಯಕ್ರಮದಲ್ಲಿ ಶ್ರೀ ಮಠದ ಶಿಷ್ಯಂದಿರು ಭಕ್ತಾದಿಗಳು ಪರಊರ ನಾಗರಿಕರು ಭಾಗವಹಿಸಲಿದ್ದಾರೆ. ಈ ಸಮಯದಲ್ಲಿ ಹೊರೆಕಾಣಿಕೆ ಸಲ್ಲಿಸುವವರು ಸಲ್ಲಿಸಬಹುದಾಗಿದೆ ಎಂದು ಶ್ರೀ ಮಠದ ಪರಿಚಾರಕ ವಿನಯ್ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
12/05/2022 06:59 pm