ಉಡುಪಿ: ಮೇ. 14 ರಂದು ರಾಜ್ಯ ಮಟ್ಟದ ಸಾಮರಸ್ಯ ನಡಿಗೆ- ಸಹಬಾಳ್ವೆ ಸಮಾವೇಶವನ್ನು ಉಡುಪಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಉಡುಪಿಯ ಅಜ್ಜರಕಾಡುವಿನ ಹುತಾತ್ಮ ಸೈನಿಕ ಸ್ಮಾರಕದ ಎದುರು ಮದ್ಯಾಹ್ನ 2 ಗಂಟೆಗೆ ಸಾಮರಸ್ಯ ನಡಿಗೆಗೆ ವಿವಿಧ ರಾಜ್ಯ ಸಂಘಟನೆಗಳ ನಾಯಕರುಗಳು ಚಾಲನೆ ನೀಡಲಿದ್ದಾರೆ.ಸಂಜೆ 4 ಗಂಟೆಗೆ ಸಹಬಾಳ್ವೆ ಸಮಾವೇಶವು ಕ್ರಿಶ್ಚಿಯನ್ ಶಾಲೆ ಮೈದಾನದಲ್ಲಿ ನಡೆಯಲಿದೆ.ಕಾರ್ಯಕ್ರಮವನ್ನು ಸರ್ವ ಧರ್ಮಗಳ ಧರ್ಮಗುರುಗಳು ಉದ್ಘಾಟನೆ ಮಾಡಲಿದ್ದಾರೆ.
ಸಹಬಾಳ್ವೆ ಉಡುಪಿ,ಕರ್ನಾಟಕ ಸಮಸ್ತ ಸೌಹಾರ್ದಪರ ಸಂಘಟನೆಗಳ ಸಹಯೋಗದಲ್ಲಿ ಸಹಬಾಳ್ವೆ ಸಮಾವೇಶ ಹಮ್ಮಿಕೊಳ್ಳಲಾಗಿದೆ.ಸಮಾವೇಶದಲ್ಲಿ ಪುತ್ತಿಗೆ ಮಠದ ಸುಗುಣೇಂದ್ರ ಶ್ರೀಗಳು ಸೌಹಾರ್ದ ಸಂದೇಶ ನೀಡಲಿದ್ದಾರೆ.
Kshetra Samachara
11/05/2022 06:47 pm