ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಬಸವ ಜಯಂತಿ ಆಚರಣೆ!

ಬೈಂದೂರು:ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಕೇಂದ್ರೀಯ ಕಛೇರಿಯಲ್ಲಿ ಬಸವ ಜಯಂತಿ ಪ್ರಯುಕ್ತ ಜಗಜ್ಯೋತಿ ಬಸವೇಶ್ವರರ 899 ನೇ ಜಯಂತ್ಯೋತ್ಸವ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಕರಾವಳಿ ಪೊಲೀಸ್ ಪಡೆ ಗಂಗೊಳ್ಳಿ ಠಾಣೆಯ ಶ್ರೀ ಶಾಂತಗೌಡ ದೊರನಹಳ್ಳಿ ಅವರು ಬಸವಣ್ಣನವರ ಹೆಸರಿನಲ್ಲಿ ಬಸವ ಸಮಿತಿ ರಚನೆಯಾಗಿ ಐದು ವರ್ಷಗಳ ಕಲಾವಧಿಯಲ್ಲಿ ಬೆರಳೆಣಿಕೆಯ ಸದಸ್ಯರಷ್ಟೇ ಇರುವುದು ಬೇಸರದ ಸಂಗತಿ ಎಂದರು. ಹಾಗೇ ಬಸವ ತತ್ವವನ್ನು ಎಲ್ಲರಿಗೂ ತಿಳಿಸುವ ಕೆಲಸ ನಾವೆಲ್ಲ ಸೇರಿ ಮಾಡೋಣ ಎಂದರು.

ಈ ಸಂದರ್ಭದಲ್ಲಿ ಹಿರಿಯರಾದ ಜಂಗಮ ಮಠದ ಗಿರೀಶ್ ಕುಮಾರ್,ಇಂಜಿನಿಯರ್ ಸೋಮನಾಥ್, ಸಂಗನಗೌಡ ಯಾಳವಾರ, ಮಾನಪ್ಪ ಸಾಹುಕಾರ, ಶಿವಾನಂದ ತಳ್ಳಹಳ್ಳಿ, ರಾಯಣ್ಣ ಅಭಿಮಾನಿ ಬಳಗದ ಸಿದ್ದಣ್ಣ ಪೂಜಾರಿ ಇನ್ನಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

04/05/2022 11:21 am

Cinque Terre

1.11 K

Cinque Terre

0

ಸಂಬಂಧಿತ ಸುದ್ದಿ