ಕಾಪು: ಉಚ್ಚಿಲದ ಮೊಗವೀರ ಸಮುದಾಯದ ಶ್ರೀ ಮಹಾಲಕ್ಷ್ಮೀ ದೇವಿಯ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ರಥೋತ್ಸವ ಮತ್ತು ನಾಗಮಂಡಲ ಕಾರ್ಯಕ್ರಮಗಳು ನಡೆಯುತ್ತಿವೆ.ಮಹಾಲಕ್ಷ್ಮೀ ,ಸಮುದ್ರರಾಜನ ಮಗಳು ಎಂಬುದು ಪ್ರತೀತಿ. ತಮಗೆ ಅನ್ನ ನೀಡುವ ಮಹಾಲಕ್ಷ್ಮೀಗೆ ಮಂಗಳೂರಿನ ಸೌತ್ ವಾರ್ಫ್ ಯಾಂತ್ರಿಕ ಮೀನುಗಾರರ ಸಹಕಾರಿ ಸಂಘ ನಿಯಮಿತದ ವತಿಯಿಂದ ದೇವಿಗೆ ಅಪರೂಪದ ಚಿನ್ನದ ಮೀನಿನ ಸರವನ್ನು ಮಾಡಿಸಲಾಗಿತ್ತು. ಮೀನಿನ ಚಿತ್ರಗಳಿಂದ ಕೂಡಿದ ಈ ಸರವು ಸುಮಾರು 50 ಪವನ್ (400 ಗ್ರಾಂ) ತೂಕವಿದ್ದು, ಅತ್ಯಾಕರ್ಷಕವಾಗಿದೆ. ಇವತ್ತು ಧಾರ್ಮಿಕ ಕಾರ್ಯಕ್ರಮದ ಸಂದರ್ಭ ದೇವಿಗೆ ಈ ಚಿನ್ನದ ಮೀನಿನ ಸರವನ್ನು ಭಕ್ತಿ ಭಾವದೊಂದಿಗೆ ಸಮರ್ಪಿಸಲಾಯಿತು.
Kshetra Samachara
09/04/2022 04:41 pm