ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಏ.2 ರಿಂದ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಗ್ರಾಮ ಭಜನೆ

ಉಡುಪಿ: ಉಡುಪಿ ಜಿಲ್ಲೆಯ 1400 ವರ್ಷ ಇತಿಹಾಸ ಇರುವ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸಮಗ್ರ ಜೀರ್ಣೋದ್ದಾರಗೊಳ್ಳುತ್ತಿದ್ದು ಮೇ 3 ರಿಂದ ಮೇ 10ರ ತನಕ ವೈಭವದ ಬ್ರಹ್ಮಕಲಶೋತ್ಸವ ನಡೆಯಲಿದೆ.ಇದರ ಪೂರ್ವಬಾವಿಯಾಗಿ ಸಮಸ್ತ ಕಡಿಯಾಳಿ ಗ್ರಾಮದ ಮನೆ ಮನೆಗಳಲ್ಲಿ ಗ್ರಾಮ ಭಜನೆ ಎಂಬ ವಿನೂತನ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಏಪ್ರಿಲ್02 ಶನಿವಾರ ಚಂದ್ರಮಾನ ಯುಗಾದಿಯ ಪರ್ವ ಕಾಲದಲ್ಲಿ ಸಂಜೆ 4.00 ಗಂಟೆಗೆ ಕಾಣಿಯೂರು ಮಠಾದೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದಂಗಳವರು ಉದ್ಘಾಟಿಸಲಿದ್ದಾರೆ.

ಕಡಿಯಾಳಿ ಗ್ರಾಮದ ಸುಮಾರು 1600 ಮನೆಗಳಿಗೆ ಐದು ತಂಡ ರಚನೆ ಮಾಡಿ ತಲಾ 12 ಜನರ ತಂಡ ಮನೆ ಮನೆಗೆ ತೆರಳಿ ದಿನ ನಿತ್ಯ ಭಜನೆ ನಡೆಸಲಿದ್ದಾರೆ. ಈ ಭಜನೆಗೆ ತಂಡಕ್ಕೆ ಕಾತ್ಯಾಯನಿ, ಪಾರ್ವತಿ, ನಾರಾಯಣಿ, ಶಾಂಭವಿ, ಮತ್ತು ಬೈರವಿ ಎಂದು ನಾಮಕರಣ ಮಾಡಿದ್ದು ಇವರು ದಿನ ನಿತ್ಯವೂ ತಲಾ 12 ರಿಂದ 15 ಮನೆಗಳಲ್ಲಿ ಭಜನೆ ಪೂರೈಸಲಿದೆ. ಈ ರೀತಿಯಾಗಿ ಬ್ರಹ್ಮಕಲಶೋತ್ಸವದ ಮುಂಚಿತವಾಗಿ ಸಮಸ್ತ ಗ್ರಾಮದ ಮನೆ ಮನೆಗಳಲ್ಲಿಯೂ ಭಜನೆ ಕಾರ್ಯಕ್ರಮ ನಡೆಯಲಿದೆ.

ಗ್ರಾಮಸ್ತರು ತಮ್ಮ ಮನೆಯ ತುಳಸಿ ಕಟ್ಟೆಯಲ್ಲಿ ದೀಪ ಇಟ್ಟಿರಬೇಕು. ಈ ಭಜನಾ ತಂಡವು ಮನೆ ಮನೆಗೆ ಭಜನಾ ಪುಸ್ತಕ ಮತ್ತು ದೇವರ ಪ್ರಸಾದ ನೀಡಲಿದೆ. ಪ್ರತಿಯೊಂದು ಮನೆಯಿಂದ ಇಬ್ಬರಂತೆ ಸೇರಿ ಏಪ್ರಿಲ್ 28ರಂದು ಭಜನಾ ಮಂಗಲೋತ್ಸವೂ ವಿಶಿಷ್ಟವಾಗಿ ಸಾಂಪ್ರದಾಯಿಕವಾಗಿ ನಡೆಯಲಿದೆ ಎಂದು ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ನಾಗೇಶ್ ಹೆಗ್ಡೆ,ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

Edited By : PublicNext Desk
Kshetra Samachara

Kshetra Samachara

31/03/2022 05:42 pm

Cinque Terre

1.39 K

Cinque Terre

0

ಸಂಬಂಧಿತ ಸುದ್ದಿ