ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಿಮ್ಮ‌ ವರ್ತನೆಗಳನ್ನು ಸರಿಪಡಿಸಿಕೊಂಡು ಬನ್ನಿ: ಮುಸ್ಲಿಂ ನಿಯೋಗಕ್ಕೆ ಪೇಜಾವರ ಶ್ರೀ ತಾಕೀತು!

ಉಡುಪಿ: ಪ್ರಸ್ತುತ ನಾಡಿನಲ್ಲಿ ಹಿಂದು ಮುಸಲ್ಮಾನ್ ಸಮುದಾಯದ ನಡುವೆ ಉಂಟಾಗಿರುವ ಕಂದಕಕ್ಕೆ ಸಂಬಂಧಿಸಿ ಸಮಸ್ಯೆ ಪರಿಹಾರ ಗೊಳಿಸಬೇಕೆಂದು ಅಪೇಕ್ಷಿಸಿ ತಮ್ಮನ್ನು ಭೇಟಿಯಾದ ಮುಸ್ಲಿಂ ನಿಯೋಗಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಒಳ್ಳೆಯ ತಿಳುವಳಿಕೆಯ ಮಾತುಗಳನ್ನು ಹೇಳಿ ಕಳುಹಿಸಿದ್ದಾರೆ .

ಈಗ ಉಂಟಾಗಿರುವ ಸಮಸ್ಯೆಗಳ ಹಿಂದೆ ಅನೇಕ ವರ್ಷಗಳ ನೋವು ಇದೆ .‌ಅದಕ್ಕೆ ಕಾರಣ ಯಾರು ಅನ್ನೋದನ್ನು ಆತ್ಮಾವಲೋಕನ ಮಾಡಿಕೊಳ್ಳಿ . ನಿರಂತರ ಗೋ ಸಾಗಾಟ ,ಗೋಹತ್ಯೆ ಯಾಕೆ ನಿಂತಿಲ್ಲ ? ಜೀವನೋಪಾಯಕ್ಕೆ ಗೋವುಗಳನ್ನು ಸಾಕಿಕೊಂಡು ಬದುಕುತ್ತಿರುವವರ ಮನೆಗೆ ನುಗ್ಗಿ ಬೆದರಿಸಿ ಗೋವುಗಳನ್ನು ಹೊತ್ತೊಯ್ತಾ ಇದ್ದೀರಿ. ಅಂತಹ ಅನೇಕ ಕಾನೂನು ಬಾಹಿರವಾದ ಕೆಲಸಗಳಿಂದ ನೊಂದಿರುವ ಹಿಂದು ಸಾಮಾಜವನ್ನು ಬಿಟ್ಟು ಶಾಂತಿ ಸೌಹಾರ್ದದ ಮಾತುಕತೆ ಅಥವಾ ಪರಿಹಾರ ನನ್ನೊಬ್ಬನಿಂದ ಸಾಧ್ಯವಿಲ್ಲ .

ಈಗ ಉಂಟಾಗಿರುವ ಪರಿಸ್ಥಿತಿಗೆ ಮೂಲ ಕಾರಣ ಯಾರು ?

ಸಮಾಜದಲ್ಲಿ ಕಾನೂನು ಶಾಂತಿ ನೆಮ್ಮದಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ರೀತಿಗಳ ಬಗ್ಗೆ ಆತ್ಮಾವಲೋಕನ‌ ಮಾಡಿಕೊಂಡು ಬನ್ನಿ ; ಮತ್ತೆ ಮಾತಾಡೋಣ ಎಂದು ಶ್ರೀಗಳು ಮುಸ್ಲಿಂ ನಿಯೋಗಕ್ಕೆ ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ.

Edited By : PublicNext Desk
Kshetra Samachara

Kshetra Samachara

30/03/2022 03:31 pm

Cinque Terre

1.84 K

Cinque Terre

3

ಸಂಬಂಧಿತ ಸುದ್ದಿ