ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಯಕ್ಷಗಾನದಲ್ಲೂ ಹಿಜಾಬ್, ಕೇಸರಿ ಹಾಸ್ಯ: ವಿಡಿಯೋ ವೈರಲ್ !

ಕಾರ್ಕಳ: ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದ ಈಗ ಹಾಸ್ಯ ಮತ್ತು ವಿಡಂಬನೆ ರುಇಪದಲ್ಲಿ ಯಕ್ಷಗಾನಕ್ಕೂ ಕಾಲಿಟ್ಟಿದೆ.

ಜಿಲ್ಲೆಯ ಕಾರ್ಕಳ ಉತ್ಸವದಲ್ಲಿ ಆಯೋಜಿಸಲಾಗಿದ್ದ ಯಕ್ಷಗಾನದಲ್ಲಿ ಈ ಪ್ರಸಂಗ ನಡೆದಿದ್ದು ಈಗ ವೈರಲ್ ಆಗುತ್ತಿದೆ.

ತೆಂಕುತಿಟ್ಟು ಯಕ್ಷಗಾನದ ಪ್ರಸಂಗವೊಂದರಲ್ಲಿ ಕೇಸರಿ ಶಾಲು ಹಾಕಿ ಕಲಾವಿದರೊಬ್ಬರು ವಿಷಯ ಪ್ರಸ್ತಾಪಿಸುತ್ತಾರೆ.ಯಕ್ಷಗಾನ ಕಲಾವಿದ ಸೀತಾರಾಮ ಕುಮಾರ್ ಅವರು ವಿವಾದ ಕುರಿತು ವಿಶ್ಲೇಷಣೆ ಮಾಡುತ್ತಾರೆ.ವಿದ್ಯಾರ್ಥಿನಿಯರನ್ನು ಸೈನಿಕರಿಗೆ ಹೋಲಿಸಿ, ಹಿಜಾಬ್ ನ್ನು ಕಪ್ಪು ಬಟ್ಟೆಗೆ ಹೋಲಿಸಿ ಹಾಸ್ಯ ಮಾಡಲಾಗುತ್ತದೆ.

ಇದಕ್ಕೆ ಪ್ರತಿಯಾಗಿ ಪ್ರಸ್ತುತ ವಿದ್ಯಮಾನಗಳ ಕುರಿತು ಯಕ್ಷಗಾನ ಪ್ರಸಂಗದಲ್ಲಿ ಪ್ರಸ್ತಾಪ ಆಗುವುದನ್ನು

ನೋಡುತ್ತಿದ್ದ ಪ್ರೇಕ್ಷಕರು ಈ ಹಾಸ್ಯಕ್ಕೆ ಚಪ್ಪಾಳೆ ಸಿಳ್ಳೆಯ ಮೂಲಕ ಸ್ಪಂದನೆ ನೀಡುತ್ತಾರೆ.ಆದರೆ ಈ ವಿಡಿಯೋ ತುಣುಕು ವೈರಲ್ ಆಗುತ್ತಿದ್ದಂತೆ, ಯಕ್ಷ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Edited By : PublicNext Desk
Kshetra Samachara

Kshetra Samachara

19/03/2022 10:42 am

Cinque Terre

4.39 K

Cinque Terre

3

ಸಂಬಂಧಿತ ಸುದ್ದಿ