ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ: ಹೊಸಬೆಳಕು ಆಶ್ರಮಕ್ಕೆ ಚಿಕಿತ್ಸಾ ಸಲಕರಣೆ, ಔಷಧಿ ವಿತರಣೆ

ಮಣಿಪಾಲ; ಮಣಿಪಾಲದ ಹೊಸಬೆಳಕು ಆಶ್ರಮಕ್ಕೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ಪ್ರಾಥಮಿಕ ಚಿಕಿತ್ಸಾ ಸಲಕರಣೆ, ಔಷಧಿಗಳು, ಶಯನ ಮಂಚದಲ್ಲಿ ದಿನಗಳ ಕಳೆಯುತ್ತಿರುವ ವೃದ್ಧರು, ವೃದ್ಧೆಯರಿಗೆ ಅಗತ್ಯವಾಗಿ ಬೇಕಾದ ಪರಿಕರಗಳು ಹಾಗೂ ಆಶ್ರಮದ ಗೋಶಾಲೆಗೆ ಹಿಂಡಿ, ಮೊದಲಾದ ಸಾಮಗ್ರಿಗಳನ್ನು ಬುಧವಾರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ದಾನಿ ಸುಶೀಲಾ ರಾವ್ ಉಡುಪಿ, ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ಆಶ್ರಮ ಸಂಚಾಲಕ ವಿನಯಚಂದ್ರ ಸಾಸ್ತಾನ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

09/02/2022 07:40 pm

Cinque Terre

2.48 K

Cinque Terre

0

ಸಂಬಂಧಿತ ಸುದ್ದಿ