ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಹಿಜಾಬ್ ವಿಷಯ ಮುಂದಿಟ್ಟು ಸೌಹಾರ್ದತೆ ಕೆಡಿಸಲು ಬಿಜೆಪಿ ಪ್ರಯತ್ನ: ಎಸ್ ಡಿಪಿಐ ಆರೋಪ

ಉಡುಪಿ: ವಿದ್ಯಾರ್ಥಿನಿಯರು ತಮ್ಮ ಸಾಂವಿಧಾನಿಕ ಹಕ್ಕಾದ ಹಿಜಾಬ್ ಗಾಗಿ ಹೋರಾಟವನ್ನು ನಡೆಸುತ್ತಿರುವಾಗ ಇದನ್ನೇ ವಿವಾದ ಮಾಡಿ ಆ ಮೂಲಕ ಸಮಾಜದ ಸೌಹಾರ್ದತೆಯನ್ನು ಕೆಡಿಸಿ, ಕೋಮು ದ್ರುವೀಕರಣಗೊಳಿಸಿ ರಾಜಕೀಯ ಲಾಭ ಪಡೆಯುವ ಪ್ರಯತ್ನವನ್ನು ಬಿಜೆಪಿ ಶಾಸಕ ರಘುಪತಿ ಭಟ್ ಮಾಡುತ್ತಿದ್ದಾರೆ ಎಂದು ಉಡುಪಿ SDPI ಜಿಲ್ಲಾಧ್ಯಕ್ಷ ನಜೀರ್ ಅಹ್ಮದ್ ಆರೋಪಿಸಿದ್ದಾರೆ.

ನಾಲ್ಕು ಗೋಡೆಗಳ ಮಧ್ಯೆ ಚರ್ಚಿಸಿ ಬಗೆಹರಿಸಬಹುದಾಗಿದ್ದ ಹಿಜಾಬ್ ವಿಷಯವನ್ನು ಬಿಜೆಪಿಯು ತನ್ನ ರಾಜಕೀಯ ಲಾಭಕ್ಕೋಸ್ಕರ ವಿವಾದಕ್ಕೀಡಾಗಿಸಿದೆ. ಹಿಜಾಬ್ ಧರಿಸಲು ಅವಕಾಶ ನೀಡಿದರೆ ಇನ್ನಿತರರು ಕೇಸರಿ ಶಾಲು ಧರಿಸುತ್ತಾರೆ, ಕೇಸರಿ ಪೇಟ ಧರಿಸುತ್ತಾರೆ, ಇವತ್ತು ಹಿಜಾಬ್ ಗೆ ಅವಕಾಶ ನೀಡಿದರೆ ನಾಳೆ ನಮಾಝ್ ಗೆ ಅವಕಾಶ ಕೇಳುತ್ತಾರೆ ಎನ್ನುವ ಅಸಂಬದ್ಧ ಹೇಳಿಕೆಯನ್ನು ನೀಡಿ ಜನರಲ್ಲಿ ಗೊಂದಲವನ್ನು ಸೃಷ್ಟಿಸಿ ಹಿಜಾಬ್ ವಿಷಯವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಾದ ಸೃಷ್ಟಿಸಿದ್ದಾರೆ.

ಅಲ್ಲದೇ, ಕಾಲೇಜು ಅಭಿವದ್ಧಿ ಮಂಡಳಿಯ ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ ಹಿಜಾಬ್ ಗಾಗಿ ಹಠ ಮಾಡಿದರೆ ನಮ್ಮ ಬಳಿ ಹಿಂದೂ ಕಾರ್ಯಕರ್ತರಿದ್ದಾರೆ. ಯಾವ ರೀತಿ ಇದನ್ನು ತಡೆಯಬೇಕು ಎಂದು ತಿಳಿದಿದೆ ಎಂಬ ಬೆದರಿಕೆಯನ್ನೂ ಒಡ್ಡುತ್ತಾರೆ.ಈ ರೀತಿಯ ಕೋಮುವಾದಿ ಮನಸ್ಥಿತಿಯ ಜನರು ಸರಕಾರಿ ಕಾಲೇಜಿನ ಅಭಿವೃದ್ಧಿ ಮಂಡಳಿಯಲ್ಲಿ ಇರುವುದರಿಂದಲೇ ವಿದ್ಯಾರ್ಥಿನಿಯರು ತಮ್ಮ ಸಾಂವಿಧಾನಿಕ ಹಕ್ಕಿನಿಂದ ವಂಚಿಸಲ್ಪಡುತ್ತಿದ್ದಾರೆ.

ರಾಷ್ಟ್ರೀಯ ಮಾನವ ಹಕ್ಕು ಆಯೋಗ ವಿದ್ಯಾರ್ಥಿನಿಯರ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿರುವುದನ್ನು ಗಮನಿಸಿ ವರದಿ ನೀಡುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ನೊಟೀಸ್ ಜಾರಿ ಮಾಡಿರುವ ಸಂದರ್ಭದಲ್ಲಿ ತೀವ್ರ ಮುಖಭಂಗಕ್ಕೀಡಾಗಿರುವ ಉಡುಪಿ ಶಾಸಕರು SDPI ಕುಮ್ಮಕ್ಕಿನಿಂದ ಹಿಜಾಬ್ ವಿವಾದವಾಗಿದೆ ಎನ್ನುವ ಬಾಲಿಷ ಹೇಳಿಕೆಯನ್ನು ನೀಡುತ್ತಿದ್ದಾರೆ. ಶಾಸಕರ ಹೇಳಿಕೆಯನ್ನು SDPI ಪಕ್ಷವು ಖಂಡಿಸುತ್ತದೆಯಲ್ಲದೇ, ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಬಿಜೆಪಿಯ ಈ ಷಡ್ಯಂತ್ರವನ್ನು ಅರಿಯಬೇಕು ಹಾಗೂ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಲು ತಮ್ಮ ಬೆಂಬಲವನ್ನು ಸೂಚಿಸಬೇಕು ಎಂದು ನಝೀರ್ ಅಹ್ಮದ್ ಮನವಿ ಮಾಡಿದ್ದಾರೆ.

Edited By : PublicNext Desk
Kshetra Samachara

Kshetra Samachara

29/01/2022 01:06 pm

Cinque Terre

2.23 K

Cinque Terre

1

ಸಂಬಂಧಿತ ಸುದ್ದಿ