ಉಡುಪಿ: ಕೃಷ್ಣಾಪುರ ಪರ್ಯಾಯೋತ್ಸವಕ್ಕೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಟ್ರಸ್ಟ್ ವತಿಯಿಂದ ಸಮರ್ಪಿಸಲಾದ ಹೊರೆಕಾಣಿಕೆ ಮೆರವಣಿಗೆಗೆ ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ ಇಂದು ನಗರದ ಜೋಡುಕಟ್ಟೆಯಲ್ಲಿ ಚಾಲನೆ ನೀಡಿದರು.
ಉಡುಪಿ ಜಿಲ್ಲಾ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಒಕ್ಕೂಟಗಳ ವತಿಯಿಂದ ಒಟ್ಟು 45377 ಕೆ.ಜಿ. ಅಕ್ಕಿ, 131000 ತೆಂಗಿನಕಾಯಿ, 18636 ಕೆ.ಜಿ.ಬೆಲ್ಲ, 4152 ಕೆ.ಜಿ. ಸಕ್ಕರೆ, 26770 ಬಾಳೆಎಲೆ, 343 ಬಾಳೆಗೊನೆ, 1063 ಸಿಹಿಯಾಳ, 6271 ಕೆ.ಜಿ.ತರಕಾರಿ, 7423 ಗೆಡ್ಡೆ ಗೆಣಸು, 102 ಅಡಿಕೆ ಗೊನೆ, 100ಕೆ.ಜಿ. ಅಡಿಕೆ, 607ಕೆ.ಜಿ. ಬೇಳೆ, 622ಕೆ.ಜಿ. ಅವಲಕ್ಕಿ, 462 ಲೀ. ಎಣ್ಣೆ, 3 ಉಪ್ಪು ಚೀಲ, 263 ಕೆ.ಜಿ. ತುಪ್ಪ, 198 ಸಿಂಗಾರ ಗೊನೆ, 4 ಅಕ್ಕಿ ಮುಡಿ, 25ಕೆ.ಜಿ. ರವೆ, 13ಕೆ.ಜಿ. ಸಬ್ಬಕ್ಕಿ, 50ಕೆ.ಜಿ. ಹಣ್ಣು ಹಂಪಲು, 415 ಹಾಳೆ ತಟ್ಟೆ, 1000 ಬತ್ತಿ ಕಟ್ಟುಗಳ ಹೊರೆಕಾಣಿಕೆಯನ್ನು ಸಮರ್ಪಿಸಲಾಯಿತು.
ಪರ್ಯಾಯೋತ್ಸವ ಸಮಿತಿಯ ಗೌರವಾಧ್ಯಕ್ಷ ರಘುಪತಿ ಭಟ್ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ ಸ್ವಾಗತಿಸಿ ವಂದಿಸಿದರು. ಹೊರೆಕಾಣಿಕೆ ಸಮಿತಿಯ ಸಂಚಾಲಕ ಸುಪ್ರಸಾದ್ ಶೆಟ್ಟಿ ಮೆರವಣಿಗೆಯ ವ್ಯವಸ್ಥೆಯನ್ನು ಮಾಡಿದರು.ಈ ಸಂದರ್ಭದಲ್ಲಿ ಪರ್ಯಾಯೋತ್ಸವ ಸಮಿತಿಯ ಅಧ್ಯಕ್ಷ ಕೆ.ಸೂರ್ಯ ನಾರಾಯಣ ಉಪಾಧ್ಯಾಯ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಟ್ರಸ್ಟ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಎಲ್.ಎಚ್.ಮಂಜುನಾಥ್, ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್, ಜಿಲ್ಲಾ ನಿರ್ದೇಶಕ ಗಣೇಶ್, ತಾಲೂಕು ನಿರ್ದೇಶಕ ರಾಮ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
Kshetra Samachara
11/01/2022 08:01 pm