ಕಾಪು: ರಾಷ್ಟ್ರೀಯ ಹೆದ್ದಾರಿಯಿಂದ ದಂಡತೀರ್ಥ ಮಠಕ್ಕೆ ಹೋಗುವ ಪ್ರವೇಶದ್ವಾರಕ್ಕೆ ನೂತನವಾಗಿ ನಿರ್ಮಿಸಿರುವ ಸ್ವಾಗತ ಗೋಪುರವನ್ನು ಭಾವೀ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಉದ್ಘಾಟಿಸಿದರು.
ಹಿಂದೆ ಜ್ಞಾನದಾನ ,ಅನ್ನದಾನದ ಜೊತೆಗೆ ಗುರುಕುಲ ಪದ್ಧತಿಯಲ್ಲಿ ವಿದ್ಯಾಭ್ಯಾಸ ನಡೆಯುತ್ತಿದ್ದ ಜಾಗ.ಈ ಗುರುಕುಲದಲ್ಲಿ ಆಚಾರ್ಯಮಧ್ವರು ವಾಸದೇವನಾಗಿ ವಿದ್ಯಾರ್ಜನೆ ಮಾಡಿರುವುದರಿಂದ ಪವಿತ್ರ ಕ್ಷೇತ್ರವಾಗಿದೆ.ಮಧ್ವ ಮತದ ಭಕ್ತಿಮಾರ್ಗದ ತತ್ವ ಪ್ರಸಾರ ಹೆಚ್ಚಾಗಿ ಜನರು ಇಲ್ಲಿಗೆ ಬರುವಂತಾಗಲಿ ಎಂದು ಅನುಗ್ರಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಮಂಗಳೂರು ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಎಂ.ಬಿ.ಪುರಾಣಿಕ್ ಶುಭ ಹಾರೈಸಿದರು.ದಂಡತೀರ್ಥ ಪ್ರತಿಷ್ಠಾನದ ಡಾ. ಸೀತಾರಾಮ ಭಟ್ ಸ್ವಾಗತಿಸಿದರು.ನೀಲಾನಂದ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.
Kshetra Samachara
05/01/2022 06:52 pm