ಉಡುಪಿ: ಉಡುಪಿ ವಿಧಾನಸಭೆ ಕ್ಷೇತ್ರದ ಕಲ್ಯಾಣಪುರ ಗ್ರಾಮ ಪಂಚಾಯತ್ ನಿವಾಸಿ ಶೀನಾ ಮತ್ತು ಸುಮತಿ ದಂಪತಿ ತೀರಾ ಬಡವರಾಗಿದ್ದು ದಾನಿಗಳು ಇವರಿಗೆ ಮನೆ ನಿರ್ಮಿಸಿ ಕೊಟ್ಟಿದ್ದಾರೆ. ಕಲ್ಯಾಣಪುರ ಗ್ರಾಮ ಪಂಚಾಯತ್ ಸದಸ್ಯರಾದ ಕೃಷ್ಣ ದೇವಾಡಿಗ, ನವೀನ್ ಕಾಂಚನ್ ಮತ್ತು ಸ್ಥಳೀಯರಾದ ಕಿಶೋರ್ ವಿವಿಧ ಸಂಘ ಸಂಸ್ಥೆಗಳ ಹಾಗೂ ದಾನಿಗಳ ಸಹಕಾರದಿಂದ ಈ ಮನೆಯನ್ನು ನಿರ್ಮಿಸಿದ್ದಾರೆ.
ಇಂದು ಈ ಮನೆಯನ್ನು ಶಾಸಕ ಕೆ. ರಘುಪತಿ ಭಟ್ ಹಸ್ತಾಂತರಿಸಿ ಇದಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಲ್ಯಾಣಪುರ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಉದಯ್ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಸತೀಶ್ ನಾಯ್ಕ್, ಪ್ರಶಾಂತ್ ಆಚಾರ್ಯ, ಪ್ರೇಮಲತಾ ಕಿಶೋರ್, ಮಾಲತಿ, ಅನಿತಾ ನಾಯ್ಕ್, ಸುನೀತಾ, ರತ್ನಾ, ಕವಿತಾ, ದಾನಿಗಳಾದ ವಿಲ್ಸನ್, ಮನೋಹರ್ ಶೆಟ್ಟಿ, ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
Kshetra Samachara
03/01/2022 06:10 pm