ಕಾರ್ಕಳ : ನಮ್ಮ ನಾಡ ಒಕ್ಕೂಟ(ರಿ) ಕಾರ್ಕಳ ಘಟಕದ ವತಿಯಿಂದ ಜಾಮಿಯಾ ಮಸೀದಿ ಮಿಯ್ಯಾರು, ನಮ್ಮ ನಾಡ ಒಕ್ಕೂಟ ಹೆಬ್ರಿ ಘಟಕ, ಉಡುಪಿ ಜಿಲ್ಲಾ ಹಾಗೂ ಸೆಂಟ್ರಲ್ ಕಮಿಟಿ ಇದರ ಸಹಯೋಗದೊಂದಿಗೆ ಆಯುಷ್ಮಾನ್ ಕಾರ್ಡ್ ಹಾಗೂ ಎನ್.ಎಸ್.ಪಿ. ವಿಧ್ಯಾರ್ಥಿ ವೇತನ ಶಿಬಿರವು ಮಿಯ್ಯಾರು ಜಾಮಿಯ ಮಸೀದಿ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮವು ಜಾಮಿಯ ಮಸೀದಿ ಮಿಯ್ಯಾರು ಇದರ ಇಮಾಮರಾದ ಮೌಲಾನ ರಾಝಿಕ್ ರವರ ಕಿರಾತ್ ನೊಂದಿಗೆ ಪ್ರಾರಂಭವಾಯಿತು. ಅಧ್ಯಕ್ಷತೆಯನ್ನು ನಮ್ಮ ನಾಡ ಒಕ್ಕೂಟ, ಕಾರ್ಕಳ ತಾಲೂಕು ಇದರ ಅಧ್ಯಕ್ಷರಾದ ಶಾಕಿರ್ ಹುಸೈನ್ ಬೈಲೂರು, ವಹಿಸಿ ಎನ್.ಎನ್.ಓ. ಇದರ ನೈಜ ಕಾರ್ಯ ಕಲಾಪಗಳ ಬಗ್ಗೆ ವಿವರಣೆಯನ್ನು ನೀಡಿದರು.
ಎನ್ ಎನ್ ಓ ಕೇಂದ್ರ ಸಮಿತಿಯ ಸದಸ್ಯ ಡಾ.ರಿಜ್ವಾನ್ ಅಹ್ಮದ್ ಹಾಗೂ ಮಾಲಾನ ಅಬ್ದುಲ್ ಹಪೀಜ್ ಅಲ್ ಖಾಸ್ಮಿ, ರವರು ಎನ್ ಎನ್ ಓ ದ್ಯೇಯೋದ್ದೇಶಗಳಾದ ಶಿಕ್ಷಣ, ಸರ್ಕಾರಿ ಉದ್ಯೋಗ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಜಿಲ್ಲಾ ಸಮಿತಿ ಸದಸ್ಯ ರಾದ ಮೊಹಮ್ಮದ್ ಮಸ್ತಫ ತಾಲೂಕುಗುಡ್ಡೆ, ಅಬ್ದುಲ್ ಸಮದ್, ಮುನವ್ವರ್ ಅಜೆಕಾರ್,ಜಾಮೀಯಾ ಮಸೀದಿ ಮಿಯ್ಯಾರು ಇದರ ಕಾರ್ಯದರ್ಶಿ ಸಾಜಿದ್, ಉಪಾಧ್ಯಕ್ಷ ಇಮ್ತಿಯಾಜ್ ಉಪಸ್ಥಿತರಿದ್ದರು.
ನಮ್ಮ ನಾಡ ಒಕ್ಕೂಟ, ಕಾರ್ಕಳದ ಕಾರ್ಯದರ್ಶಿ ಶೇಖ್ ಶಬ್ಬೀರ್ ಅಹ್ಮದ್ ಮಿಯಾರು ಪ್ರಾಸ್ತಾವಿಕವಾಗಿ ಮಾತನಾಡಿದರು.
Kshetra Samachara
29/12/2021 05:10 pm