ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಡಿ.19ರಂದು ಉಡುಪಿಯಲ್ಲಿ 'ಗಾನಮಾಧುರಿ' ಎಂಬ ವಿಶೇಷ ಸಂಗೀತ ಕಚೇರಿ

ಉಡುಪಿ: ಕಾಸರಗೋಡು ಜಿಲ್ಲೆಯ ಬದಿಯಡ್ಕ ಸಮೀಪದ ಬಳ್ಳಪದವಿನಲ್ಲಿರುವ 'ವೀಣಾವಾದಿನೀ ಸಂಗೀತ ವಿದ್ಯಾಪೀಠ'ವು ಉಡುಪಿಯ ಇಂದ್ರಾಣಿ ಶ್ರೀ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಡಿಸೆಂಬರ್ 19 ರ ಭಾನುವಾರದಂದು ಸಂಜೆ 5.00 ರಿಂದ 'ಗಾನಮಾಧುರಿ' ಎಂಬ ವಿಶೇಷ ಸಂಗೀತ ಕಚೇರಿಯೊಂದನ್ನು ಆಯೋಜಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಾ.ವಸಂತಕುಮಾರ ಪೆರ್ಲ, ವೀಣಾವಾದಿನೀ ಸಂಗೀತ ವಿದ್ಯಾಪೀಠದ ರೂವಾರಿ ಹಾಗೂ ಪ್ರಸಿದ್ಧ ಸಂಗೀತಗಾರರಾದ 'ಗಾನಪ್ರವೀಣ' ಯೋಗೀಶ ಶರ್ಮಾ ಬಳ್ಳಪದವು ಅವರು ಕಲಾವಿದರಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪಿಟೀಲಿನಲ್ಲಿ ಕೇರಳದ ಪ್ರಸಿದ್ಧ ವಿದ್ವಾಂಸರಾದ ಮಾಣ್ಣೂರ್ ರಂಜಿತ್, ಮೃದಂಗಮ್ ನಲ್ಲಿ ವೈಕಂ ಪ್ರಸಾದ್ ಹಾಗೂ ಘಟಮ್ ನಲ್ಲಿ ಮಾನ್ಸೂರ್ ಉಣ್ಣಿಕೃಷ್ಣನ್ ಅವರು ಸಹಕರಿಸಲಿದ್ದಾರೆ.

ಕಾಸರಗೋಡು ಮಾತ್ರವಲ್ಲದೆ ಮಂಗಳೂರಿನಲ್ಲೂ ತನ್ನ ಶಾಖೆಯನ್ನು ಹೊಂದಿರುವ ವೀಣಾವಾದಿನೀ ಸಂಗೀತ ವಿದ್ಯಾಪೀಠವು ಆನ್ ಲೈನ್ ಮೂಲಕವೂ ದೇಶ-ವಿದೇಶಗಳ ಸಂಗೀತಾಸಕ್ತರಿಗೆ ತರಗತಿಗಳನ್ನು ನಡೆಸುತ್ತ ಮತ್ತು ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಸಂಗೀತಪ್ರಿಯರ ಮಚ್ಚುಗೆಗೆ ಪಾತ್ರವಾಗಿದೆ. 1999ರಲ್ಲಿ ಬಳ್ಳಪದವು ಎಂಬ ಗ್ರಾಮೀಣ ಪ್ರದೇಶದಲ್ಲಿ ಆರಂಭವಾದ ಈ ಸಂಸ್ಥೆಯು ಕರಾವಳಿಯ ಮೂರು ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣ ನೀಡುತ್ತ, ವಿವಿಧ ಪ್ರದೇಶಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ ಎಂದು ಹೇಳಿದರು. ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

17/12/2021 12:58 pm

Cinque Terre

966

Cinque Terre

0

ಸಂಬಂಧಿತ ಸುದ್ದಿ