ಉಡುಪಿ: ಮಹಿಳೆಯರ ಉದ್ಯಮ ಶೀಲತೆಯ ನೈಪುಣ್ಯತೆಯನ್ನು ಒರೆಗೆ ಹಚ್ಚಲು ಜನ್ಮತಾಳಿರುವ ಮಣಿಪಾಲದ ಪವರ್ (Platform Of Women Entrepreneur Regd) ಸಂಸ್ಥೆ , 2009 ಮಾರ್ಚ್ 8ರಂದು ಪ್ರಾರಂಭಗೊಂಡಿತು. ಈ ಸಂಸ್ಥೆ ಕೇವಲ ಅಲ್ಪಾವಧಿಯಲ್ಲಿ ಕರಾವಳಿಯ ಉದ್ದಗಲದಲ್ಲೂ ಮಹಿಳಾ ಉದ್ದಿಮೆದಾರರ ಮನೆಮಾತಾಗಿದೆ. ಕಾಲಕಾಲಕ್ಕೆ ಇಂತಹ ಉದ್ದಿಮೆದಾರರ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಬಗೆಹರಿಸಿ, ಪ್ರಗತಿಯನ್ನು ಪರಿಶೀಲಿಸಿ ಕ್ಲಪ್ತ ಸಮಯಕ್ಕೆ ಸಹಾಯ ಹಸ್ತವನ್ನು ನೀಡಿ ಯಶಸ್ಸನ್ನು ಕಾಣುವಲ್ಲಿ ಕಾರಣೀಭೂತವಾದ ಈ ಸಂಸ್ಥೆ ತನ್ನ ಹೆಸರೇ ಸುಚಿಸುವಂತೆ ಮಹಿಳಾ ಉದ್ದಿಮೆದಾರರಿಗೆ ಹುರುಪು ಹಾಗೂ ಶಕ್ತಿ ತುಂಬುವಲ್ಲಿ ತನ್ನ ನಿಸ್ವಾರ್ಥ ಸೇವೆ ನಡೆಸುತ್ತಿದೆ.
ಪ್ರತಿವರ್ಷ ನವಂಬರ್ ೧೯ರಂದು ಅಂತಾರಾಷ್ಟ್ರೀಯ ಉದ್ದಿಮೆದಾರರ ದಿನವನ್ನು ವಿಶೇಷ ರೀತಿಯಲ್ಲಿ ಎಂಪವರ್ ಎಂಬ ಶೀರ್ಷಿಕೆಯಲ್ಲಿ ಉದ್ಯಮಶೀಲತೆಯ ವಿಚಾರಗೋಷ್ಠಿ ಹಾಗೂ ಯಶಸ್ವಿ ಉದ್ದಿಮೆದಾರರನ್ನು ಗುರುತಿಸುವುದದೊಂದಿಗೆ ಆಚರಿಸಲಾಗುತ್ತದೆ.ಈ ಬಾರಿಯೂ ಈ ವಿಶೇಷದಿನವನ್ನು ನವಂಬರ್ ತಿಂಗಳ ೨೦ ನೇ ತಾರೀಕಿನಂದು ಹೋಟೆಲ್ ಓಶನ್ ಪರ್ಲ್ ನಲ್ಲಿ "ಎಂಪವರ್" ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಗೃಹಿಣಿ ಶ್ರೀಮತಿ ಸಂಧ್ಯಾ ಸುಭಾಷ್ ಕಾಮತ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಉಡುಪಿ ಶಾಸಕ ಕೆ ರಘುಪತಿ ಭಟ್ ಹಾಗೂ ಜಿಲ್ಲಾಧಿಕಾರಿಗಳಾದ ಎಂ ಕೂರ್ಮಾ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಈ ಎಂಪವರ್ ಕಾರ್ಯಕ್ರಮದ ವಿಚಾರ ಗೋಷ್ಠಿಯಲ್ಲಿ ಅಟಲ್ ಇಂಕುಬೇಷನ್ ಸೆಂಟರ್ ನಿಟ್ಟೆ ಇಲ್ಲಿನ ಮುಖ್ಯಸ್ಥ ರಾದ ಡಾ II ಎ ಪಿ ಆಚಾರ್ ಹಾಗೂ ದೇಶದ ವಿವಿಧ ಮೂಲೆಗಳಿಂದ ಪ್ರಸಿದ್ಧ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಗ್ರಾಮೀಣ ಹಾಗೂ ನಗರದ ಯಶಸ್ವಿ ಮಹಿಳಾ ಉದ್ಯಮಿಗಳನ್ನು ಗುರುತಿಸಿ ಎಂಪವರ್ ಪ್ರಶಸ್ತಿಯ ಮೂಲಕ ಗೌರವಿಸಲಾಗುತ್ತದೆ.ಹಾಗೂ ಈ ವಿಶೇಷ ಕಾರ್ಯಕ್ರಮದ ಬೆನ್ನೆಲುಬಾಗಿ ಅಟಲ್ ಇಂಕುಬೇಷನ್ ಸೆಂಟರ್ ನಿಟ್ಟೆ ಸಂಪನ್ಮೂಲ ಸಹಯೋಗ ನೀಡಲಿದೆ. ಅದೇ ರೀತಿ ನಾಡಿನ ಪ್ರಖ್ಯಾತ ಆರ್ಥಿಕ, ವಾಣಿಜ್ಯ ಸಂಸ್ಥೆಗಳಾದ ಬ್ಯಾಂಕ್ ಆಫ್ ಬರೋಡ, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್, ಏನ್ ಎಂ ಪಿ ಟಿ , ಆಭರಣ ಜ್ಯುವೆಲರ್ಸ್ ಕೈ ಜೋಡಿಸಿದೆ. ಉಡುಪಿ ಜಿಲ್ಲೆಯ ಮೂಲೆ ಮೂಲೆಗಳಿಂದ ಪ್ರಖ್ಯಾತ ಮಹಿಳಾ ಉದ್ದಿಮೆದಾರರು, ಉದ್ಯಮ ಆಕಾಂಕ್ಷಿಗಳು ಹಾಗೂ ಉದ್ಯಮ ಶೀಲತೆಯ ಕಡೆಗೆ ಆಕರ್ಷತರಾಗಬಲ್ಲ ಯುವ ವಿದ್ಯಾರ್ಥಿನಿಯರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ಮುಖ್ಯ ಸಂಯೋಜಕರಾದ ಶ್ರೀಮತಿ ರಶ್ಮಿ ವಿಜಯೇಂದ್ರ ಹಾಗೂ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ತಾರಾ ತಿಮ್ಮಯ್ಯ ಮಾಹಿತಿ ನೀಡಿದರು. ಪತ್ರಿಕಾ ಗೋಷ್ಠಿಯಲ್ಲಿ ಪವರ್ ಸಂಸ್ಥೆಯ ಪದಾಧಿಕಾರಿಗಳಾದ ಶ್ರೀಮತಿ ಸುಗುಣ ಶಂಕರ್, ಶ್ರೀಮತಿ ಪ್ರಿಯ, ಶ್ರೀಮತಿ ಸುವರ್ಷ, ಶ್ರೀಮತಿ ಪಲ್ಲವಿ ಉಪಸ್ಥಿತರಿದ್ದರು.
Kshetra Samachara
18/11/2021 02:20 pm