ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಕ್ಕಳ ಭಿಕ್ಷಾಟನೆ ನಿರ್ಮೂಲನೆ ನಮ್ಮೆಲ್ಲರ ಹೊಣೆ: ಪೇಜಾವರ ಶ್ರೀ

ಉಡುಪಿ: ಚೈಲ್ಡ್ ಲೈನ್-1098(ಹತ್ತು ಒಂಭತ್ತು ಎಂಟು) ಉಡುಪಿಯ ವತಿಯಿಂದ ಮಕ್ಕಳ ದಿನಾಚರಣೆ ಮತ್ತು ಚೈಲ್ಡ್ ಲೈನ್ ಸೇ ದೋಸ್ತಿ ಸಪ್ತಾಹದ ಅಂಗವಾಗಿ ಮಕ್ಕಳ ಭಿಕ್ಷಾಟನೆಯ ನಿರ್ಮೂಲನೆಗೊಳಿಸುವ ಕುರಿತು ಜಾಗೃತಿಯನ್ನು ಮೂಡಿಸಲು ಸಲುವಾಗಿ ಭಿತ್ತಿಪತ್ರದ ಬಿಡುಗಡೆ ಕಾರ್ಯಕ್ರಮವನ್ನು ಶ್ರೀ ಪೇಜಾವರ ಮಠ, ಉಡುಪಿ ಇಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಅಂಗವಾಗಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯರು, ಪೇಜಾವರ ಮಠದ ಮಠಾಧೀಶರು ಮತ್ತು ಶ್ರೀಕೃಷ್ಣ ಸೇವಾಧಾಮ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ವಿಶ್ವ ಪ್ರಸನ್ನತೀರ್ಥ ಶ್ರೀಪಾದರು ಭಿತ್ತಿ ಪತ್ರವನ್ನು ಬಿಡುಗಡೆಗೊಳಿಸಿ, ಭಿಕ್ಷಾಟನೆ ಎನ್ನುವುದು ಸಮಾಜದ ಒಂದು ದೊಡ್ಡ ಪಿಡುಗು, ಇದರ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮಕ್ಕಳ ಭಿಕ್ಷಾಟನೆಯನ್ನು ಹೋಗಲಾಡಿಸುವ ಸಲುವಾಗಿ ಚೈಲ್ಡ್ ಲೈನ್ -1098, ಉಡುಪಿಯು ತೆಗೆದುಕೊಂಡ ನಿರ್ಣಯ ಅತ್ಯಂತ ಶ್ಲಾಘನೀಯ. ಭಿಕ್ಷೆ ಬೇಡುವ ಮಕ್ಕಳಿಗೆ ಹಣವನ್ನು ನೀಡಿದರೆ ಅದು ಸದುಪಯೋಗವಾಗದೇ, ದುರುಪಯೋಗದ ಮೂಲವಾಗುತ್ತಿದೆ. ಆದ್ದರಿಂದ ಯಾರೂ ಕೂಡ ಭಿಕ್ಷೆ ಬೇಡುವ ಮಕ್ಕಳಿಗೆ ಹಣವನ್ನು ನೀಡದೆ, ಸಹಾಯ ಮಾಡುವ ಇಚ್ಛೆಯುಳ್ಳವರು ಆಹಾರ ಮತ್ತು ಬಟ್ಟೆ ನೀಡಬೇಕು ಅಥವಾ ಅಂತಹ ಮಕ್ಕಳಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕು. ಹೀಗೆ ಮಾಡಿದಲ್ಲಿ ಮಕ್ಕಳ ಭಿಕ್ಷಾಟನೆ ಅವಶ್ಯವಾಗಿ ನಿರ್ಮೂಲನೆಯಾಗುತ್ತದೆ. ಈ ದಿಸೆಯಲ್ಲಿ ಸಮಾಜದ ಎಲ್ಲರೂ ಕೈ ಜೋಡಿಸೋಣ, ಈ ಮೂಲಕ ಮಕ್ಕಳ ಭಿಕ್ಷಾಟನೆ ಹೋಗಲಾಡಿಸುವ ಪ್ರಕ್ರಿಯೆ ಯಶಸ್ವಿಯಾಗಲಿ ಶುಭ ಹಾರೈಸಿದರು.

ನಂತರ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಸಿಟಿ ಬಸ್ ಸ್ಟ್ಯಾಂಡ್, ಸರ್ವಿಸ್ ಬಸ್ ಸ್ಯಾಂಡ್ ಹಾಗೂ ಕೆ.ಎಸ್. ಆರ್.ಟಿ.ಸಿ. ಬಸ್ ಸ್ಟ್ಯಾಂಡ್ ನಲ್ಲಿರುವ ಬಸ್ಸುಗಳ ಚಾಲಕರಿಗೆ, ಆಟೋ ಚಾಲಕರಿಗೆ ಮಾಹಿತಿಯನ್ನು ನೀಡಿ ಭಿತ್ತಿ ಪತ್ರವನ್ನು ಹಂಚಲಾಯಿತು ಹಾಗೂ ಮಕ್ಕಳು ಹಣಕ್ಕೆ ಕೈ ಚಾಚುತ್ತಿದ್ದರೆ ಹಣ ನೀಡದೇ ತಿಂಡಿ- ಬಟ್ಟೆಗಳನ್ನು ನೀಡಿ ಎಂದು ಜಾಗೃತಿಯನ್ನು ನೀಡಲಾಯಿತು ಮತ್ತು ಮಕ್ಕಳು ಭಿಕ್ಷಾಟನೆಯಲ್ಲಿ ನಿರತರಾಗಿರುವುದನ್ನು ಕಂಡಲ್ಲಿ ಚೈಲ್ಡ್ ಲೈನ್ - 1098(ಹತ್ತು ಒಂಭತ್ತು ಎಂಟು) ಕರೆ ಮಾಡಿ ತಿಳಿಸುವಂತೆ ಕೋರಲಾಯಿತು. ಕಾರ್ಯಕ್ರಮದಲ್ಲಿ ಚೈಲ್ಡ್ ಲೈನ್-1098 ಉಡುಪಿಯ ನಿರ್ದೇಶಕರಾದ ರಾಮಚಂದ್ರ ಉಪಾಧ್ಯಾಯ, ಸಹ ನಿರ್ದೇಶಕರಾದ ಗುರುರಾಜ್ ಭಟ್ ಮತ್ತು ಚೈಲ್ಡ್ ಲೈನ್ 1098, ಉಡುಪಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

17/11/2021 06:38 pm

Cinque Terre

1.92 K

Cinque Terre

0

ಸಂಬಂಧಿತ ಸುದ್ದಿ