ಕಾರ್ಕಳ: ಪ್ರಜೆಗಳೇ ಪ್ರಭುಗಳಾಗುವ ‘ಪ್ರಜಾಪ್ರಭುತ್ವ’ ವ್ಯವಸ್ಥೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಹಾಗೂ ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸುವ ದಿಸೆಯಲ್ಲಿ ಜಾರ್ಕಳ ಮುಂಡ್ಲಿ ಸ.ಹಿ.ಪ್ರಾ.ಶಾಲೆಯಲ್ಲಿ ಮಕ್ಕಳ ಶಾಲಾ ಸಂಸತ್ತು ರಚನೆಗೊಂಡಿತು.ಮಕ್ಕಳಲ್ಲಿ ಸಂಸದೀಯ ವ್ಯವಸ್ಥೆಯ ಬಗೆಗೆ ಈಗಿನಿಂದಲೇ ತಿಳಿವಳಿಕೆ ನೀಡುವ ಸಲುವಾಗಿ ಇಲ್ಲಿಯ ಶಿಕ್ಷಕ ವೃಂದ ಇಂತಹದ್ದೊಂದು ವ್ಯವಸ್ಥೆ ಮಾಡಿತ್ತು.
ಚುನಾವಣೆ ಅಧಿಸೂಚನೆ ಹೊರಡಿ ಸುವುದರೊಂದಿಗೆ ಶಾಲಾ ಸಂಸತ್ತಿನ ಚುನಾವಣೆ ಪ್ರಕ್ರಿಯೆ ಆರಂಭವಾಯಿತು. ನಾಮಪತ್ರ ಸಲ್ಲಿಕೆ, ನಾಮಪತ್ರ ವಾಪಸ್ ಪಡೆಯುವುದು, ನಾಮಪತ್ರ ಪರಿಶೀಲನೆ, ಪ್ರಚಾರ, ಚುನಾವಣೆ ದಿನಾಂಕ, ಮತ ಎಣಿಕೆ, ಫಲಿತಾಂಶ ಘೋಷಣೆ ಹೀಗೆ ಪ್ರತಿಯೊಂದನ್ನೂ ಅಚ್ಚುಕಟ್ಟಾಗಿ ನಿರ್ವಹಿಸಲಾಯಿತು.ಮಕ್ಕಳು ಅತ್ಯಂತ ಉತ್ಸಾಹದಿಂದ ಚುನಾವಣೆ ಪ್ರಕ್ರಿಯೆಯ ಪ್ರತಿ ಹಂತದಲ್ಲೂ ಉತ್ಸಾಹದಿಂದ ತೊಡಗಿಕೊಳ್ಳುವ ಮೂಲಕ ಶಿಕ್ಷಕರಿಗೆ ಅಚ್ಚರಿ ಮೂಡಿಸಿದರು.
ಮುಖ್ಯ ಶಿಕ್ಷಕರಾದ ವಿಜಯ ಜೈನ್ ಮತ್ತು ಸಹ ಶಿಕ್ಷಕರಾದ ಆಶಾ, ಪ್ರತಿಭಾ, ಪ್ರಜ್ವಲ್ ಜೈನ್ , ಸಾರಿಕಾ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಮಾರ್ಗದರ್ಶನ ನೀಡಿದರು.
Kshetra Samachara
12/11/2021 09:18 pm