ಉಡುಪಿ: ರಂಗಭೂಮಿ (ರಿ.) ಉಡುಪಿ ನಾಟಕ ಮತ್ತು ಸಾಂಸ್ಕೃತಿಕ ಸಂಸ್ಥೆ ವತಿಯಿಂದ ರಾಜ್ಯದ ಹೆಸರಾಂತ ರಂಗಕರ್ಮಿಗಳ ಸಹಕಾರದೊಂದಿಗೆ ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಆಯೋಜಿಸಿರುವ 2 ದಿನಗಳ ವಿವಿಧ ರಂಗ ತರಬೇತಿ ಕಾರ್ಯಗಾರವನ್ನು ಇಂದು ಶಾಸಕ ರಘುಪತಿ ಭಟ್ ಉದ್ಘಾಟಿಸಿದರು.
ರಂಗಭೂಮಿ ಕ್ಷೇತ್ರಕ್ಕೆ ಹೊಸ ನೀರು ಹರಿದು ಬರಬೇಕೆಂಬ ಮಹತ್ತರ ಸಂಕಲ್ಪದೊಂದಿಗೆ ಉಡುಪಿಯಲ್ಲಿ ಪ್ರತಿ ತಿಂಗಳ 2ನೇ ಅಥವಾ 3ನೇ ವಾರಂತ್ಯದಲ್ಲಿ ರಾಜ್ಯದ ಹೆಸರಾಂತ ರಂಗಕರ್ಮಿಗಳ ಸಹಕಾರದೊಂದಿಗೆ ಈ ರಂಗ ತರಬೇತಿ ಕಾರ್ಯಾಗಾರ ನಡೆಯಲಿದೆ.
ಈ ಸಂದರ್ಭದಲ್ಲಿ ರಂಗಕರ್ಮಿ ಹಾಗೂ ಚಲನಚಿತ್ರ ನಟ ಮಂಡ್ಯ ರಮೇಶ್, ಸೂರಜ್ ಇಂಟರ್ ನ್ಯಾಷನಲ್ ಹೋಟೆಲ್, ಸೂರತ್ಕಲ್ ನ ರವೀಂದ್ರ ಪೂಜಾರಿ, ಎಂ.ಜಿ.ಎಂ ಕಾಲೇಜು ಪ್ರಾಂಶುಪಾಲರಾದ ದೇವಿದಾಸ್ ಎಸ್. ನಾಯ್ಕ್, ರಂಗಭೂಮಿ (ರಿ.) ಉಡುಪಿಯ ಅಧ್ಯಕ್ಷರಾದ ತಲ್ಲೂರು ಶಿವರಾಮ ಶೆಟ್ಟಿ, ಉಪಾಧ್ಯಕ್ಷರಾದ ನಂದಕುಮಾರ್ ಎಂ, ಭಾಸ್ಕರ್ ರಾವ್ ಕಿದಿಯೂರು, ಪ್ರಧಾನ ಕಾರ್ಯದರ್ಶಿಗಳಾದ ಪ್ರದೀಪ್ ಚಂದ್ರ ಕುತ್ಪಾಡಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
Kshetra Samachara
16/10/2021 10:52 am