ಕಟಪಾಡಿ: 7 ವರ್ಷದಿಂದ 18 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಉಚಿತ ಚಿನ್ನದ ಮೂಗುತಿ ಧಾರಣೆ ಕಾರ್ಯಕ್ರಮವು ಅಕ್ಟೋಬರ್ 10ರಂದು ಬೆಳಿಗ್ಗೆ 9 ಗಂಟೆಗೆ ಸಾಯಿಬಾಬಾ ಮಂದಿರದಲ್ಲಿ ಜರಗಲಿರುವುದಾಗಿ ಸಂಘಟಕರು ತಿಳಿಸಿದ್ದಾರೆ.
ಇವತ್ತು ಸುದ್ದಿಗೋಷ್ಠಿ ನಡೆಸಿದ ಸಾಯಿ ಸಂಸ್ಥಾನ ಮಂದಿರದ ವಿಶ್ವನಾಥ್ ಸುವರ್ಣ, ಈ ವಿಶೇಷ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಕಲ್ಲಡ್ಕ ಪ್ರಭಾಕರ ಭಟ್ ಕಾರ್ಯಕ್ರಮ ಉದ್ಘಾಟನೆ ಮಾಡಿ ಧಾರ್ಮಿಕ ಪ್ರವಚನ ನೀಡುವರು. ಶ್ರೀ ಕ್ಷೇತ್ರ ಕರಿಂಜೆ ಮಠ ಮೂಡುಬಿದ್ರೆಯ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಭಾ ವೇದಿಕೆಯಲ್ಲಿ ಸಾಯಿ ಸಂಸ್ಥಾನ ಮಂದಿರದ ಟ್ರಸ್ಟಿ ವಿಶ್ವನಾಥ್ ಸುವರ್ಣ, ಅಧ್ಯಕ್ಷ ಸುಧಾಕರ್ ಶೆಟ್ಟಿ ಹಾಗೂ ಗುರೂಜಿ ಸಾಯಿ ಈಶ್ವರ್ ಉಪಸ್ಥಿತರಿರಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಾಯಿ ಸಂಸ್ಥಾನ ಮಂದಿರದ ಗುರೂಜಿ ಸಾಯಿ ಈಶ್ವರ್ ವಿಶ್ವನಾಥ್ ಸುವರ್ಣ, ಸುಧಾಕರ ಶೆಟ್ಟಿ, ರಾಧಾಕೃಷ್ಣ ಮೆಂಡನ್, ಸಂಧ್ಯಾ ನಾಯಕ್, ಸತೀಶ್ ದೇವಾಡಿಗ ಉಪಸ್ಥಿತರಿದ್ದರು.
Kshetra Samachara
06/10/2021 01:03 pm