ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಪರಂಪರಾ ಕಲ್ಚರಲ್ ಫೌಂಡೇಶನ್ ಏರ್ಪಡಿಸಿದ ಸ್ಪರ್ಧೆಯಲ್ಲಿ ರಿಷಿಕಾಗೆಪ್ರಥಮ ಸ್ಥಾನ

ಉಡುಪಿ : ಬೆಂಗಳೂರಿನ ಪರಂಪರಾ ಕಲ್ಚರಲ್ ಫೌಂಡೇಶನ್ ವತಿಯಿಂದ ಸ್ವಾತಂತ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಮಕ್ಕಳಿಗೆ ಏರ್ಪಡಿಸಿದ್ದ ದೇಶಭಕ್ತಿ ಗೀತೆಗಳ ವಾಚನಾ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಹಟ್ಟಿಯಂಗಡಿ ಶ್ರೀ ಸಿದ್ದಿವಿನಾಯಕ ವಸತಿ ಶಾಲೆಯ 6ನೇ ತರಗತಿಯ ವಿಧ್ಯಾರ್ಥಿನಿ ಕುಮಾರಿ ರಿಷಿಕಾ ರಾಮ ದೇವಾಡಿಗ ಪ್ರಥಮ ಸ್ಥಾನ ಪಡೆದಿದ್ದಾಳೆ. ಅವರು ಶಿಕ್ಷಕ ದಂಪತಿಗಳಾದ ರೂಪ ಮತ್ತು ರಾಮ ದೇವಾಡಿಗ ಬೈಂದೂರು ಇವರ ಪುತ್ರಿಯಾಗಿದ್ದಾಳೆ. ಅಗಸ್ಟ್ 3 ರಂದು 10 ರವರೆಗೆ ನಡೆದ ಈ ದೇಶ ಭಕ್ತಿಗೀತೆಗಳ ವಾಚನಾ ಸ್ಪರ್ಧೆಯಲ್ಲಿ ಹೊರರಾಜ್ಯ ಮತ್ತು ಹೊರದೇಶಗಳ ಮಕ್ಕಳು ಭಾಗವಹಿಸಿದ್ದರು. ಇವರೆಲ್ಲರಿಗಿಂತ ಸ್ಪರ್ಧೆಯಲ್ಲಿ ಸೈ ಎನಿಸಿಕೊಂಡ ರಿಷಿಕಾ ರಾಮ ದೇವಾಡಿಗ ಹೆತ್ತವರ, ವಿಧ್ಯಾಭ್ಯಾಸ ಮಾಡುತ್ತಿರುವ ಶಾಲೆಯ ಮತ್ತು ಊರಿನ ಸಮಸ್ತ ನಾಗರೀಕರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.

Edited By : PublicNext Desk
Kshetra Samachara

Kshetra Samachara

08/09/2021 08:00 pm

Cinque Terre

14.09 K

Cinque Terre

2

ಸಂಬಂಧಿತ ಸುದ್ದಿ