ಉಡುಪಿ: ಉಪ್ಪೂರು ಸ್ಪಂದನ ಬೌದ್ಧಿಕ ದಿವ್ಯಾಂಗರ ವಸತಿ ಶಾಲೆಯಲ್ಲಿ ಶಾಸಕ ಶ್ರೀ ಕೆ. ರಘುಪತಿ ಭಟ್ ಅವರು ತಮ್ಮ 52ನೇ ಜನ್ಮದಿನಾಚರಣೆ ಆಚರಿಸಿದರು.
ಈ ಸಂದರ್ಭದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಘವೇಂದ್ರ ಕಿಣಿ, ಉಪ್ಪೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೃಷ್ಣರಾಜ್ ಕೋಟ್ಯಾನ್, ಉಪಾಧ್ಯಕ್ಷರಾದ ವಿದ್ಯಾ ಆಚಾರ್, ಕಲ್ಯಾಣಪುರ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಪ್ರದೀಪ್ ಮಧ್ಯಸ್ಥ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಅಕ್ರಮ-ಸಕ್ರಮ ಸಮಿತಿಯ ಸದಸ್ಯರಾದ ರಾಜು ಪೂಜಾರಿ, ಉಪ್ಪೂರು ಗ್ರಾಮ ಪಂಚಾಯತ್ ಸದಸ್ಯರುಗಳಾದ ರಾಜೇಶ್ವರಿ, ಪ್ರಕಾಶ್ ದೇವಾಡಿಗ, ಸಂತೋಷ್, ಅವಿನಾಶ್ ಶೆಟ್ಟಿ, ನೇತ್ರಾವತಿ, ಲಲಿತಾ, ಮಹೇಶ್ ಕೋಟ್ಯಾನ್, ಸುಮತಿ ಕೋಟ್ಯಾನ್, ಪಂಚಾಯತ್ ಮಾಜಿ ಸದಸ್ಯರಾದ ನಾರಾಯಣ್ ಶೆಟ್ಟಿ ಮತ್ತು ಶಾಸಕರ ಧರ್ಮಪತ್ನಿ ಶಿಲ್ಪಾ ಆರ್ ಭಟ್, ಮಗನಾದ ರೆಯ್ಯಾನ್ಶ್ ಹಾಗೂ ಪಕ್ಷದ ಹಿರಿಯರು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
24/02/2021 09:58 pm