ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ : ರೆಡ್‌ ಕ್ರಾಸ್‌ ಸಂಸ್ಥೆಯಿಂದ 2.16 ಲಕ್ಷ ರೂಪಾಯಿ ವೆಚ್ಚದ ಗೃಹೋಪಯೋಗಿ ವಸ್ತುಗಳ ಕಿಟ್‌ ವಿತರಣೆ

ಕಾರ್ಕಳ: ಮುನಿಯಾಲು ಮಹೇಶ್ವರ ಕ್ಯಾಶೂ ಇಂಡಸ್ಟ್ರೀಸ್‌ ನೌಕರರಾದ ಅರ್ಹ ಫಲಾನುಭವಿಗಳಿಗೆ ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಯ ವತಿಯಿಂದ ಜಿಲ್ಲಾ ಲಯನ್ಸ್‌ ಕ್ಲಬ್‌ ಮತ್ತು ಮುನಿಯಾಲು ಕ್ಲಬ್‌ ಸಹಕಾರದಲ್ಲಿ ಕೊರೋನಾ ಸಂಕಷ್ಟಕ್ಕಾಗಿ ಗೃಹೋಪಯೋಗಿ ವಸ್ತುಗಳ ಕಿಟ್‌ಗಳನ್ನು ಇತ್ತೀಚೆಗೆ ವಿತರಿಸಲಾಯಿತು.

2.16 ಲಕ್ಷ ರೂಪಾಯಿ ವೆಚ್ಚದಲ್ಲಿ ತಲಾ 3 ಸಾವಿರ ರೂಪಾಯಿ ಮೌಲ್ಯದ 72 ಕಿಟ್‌ ಗಳನ್ನು ನೀಡಲಾಗಿದ್ದು ಕುಕ್ಕರ್‌, ಫ್ಯಾನ್‌, ಪ್ಲೇಟ್‌, ಸೌಟು ಸಹಿತ ಹಲವು ಗ್ರಹೋಪಯೋಗಿ ವಸ್ತುಗಳನ್ನು ನೀಡಲಾಗಿದೆ. ಜನತೆ ಕೊರೋನೋತ್ತರ ಜೀವನದ ಸಂಕಷ್ಟದಲ್ಲಿ ಸಮಾಜಸೇವಕ ಮುನಿಯಾಲು ಗೋಪಿನಾಥ ಭಟ್‌ ನೇತ್ರತ್ವದಲ್ಲಿ ಅರ್ಹರಿಗೆ ತಲುಪಿಸಲಾಗಿದೆ. ಮುನಿಯಾಲು ಲಯನ್ಸ್‌ ಕ್ಲಬ್‌ ಅತ್ಯುತ್ತಮವಾಗಿ ಜನಸೇವೆ ಮಾಡುತ್ತಿದ್ದು ಅರ್ಹರನ್ನೇ ಹುಡುಕಿ ಸೌಲಭ್ಯ ನೀಡುತ್ತಿದೆ ಎಂದು ರೆಡ್‌ ಕ್ರಾಸ್‌ ಸಂಸ್ಥೆಯ ಸಭಾಪತಿ ಡಾ.ತಲ್ಲೂರು ಶಿವರಾಮ ಶೆಟ್ಟಿ ಮೆಚ್ಚುಗೆ ವ್ಯಕ್ತ ಪಡಿಸಿದರು.

ಕೊಡಗು ಮಡಿಕೇರಿ ವೈಧ್ಯಕೀಯ ವಿಜ್ಞಾನ ಕಾಲೇಜಿನ ಮೆಡಿಷಿನ್‌ ವಿಭಾಗದ ಮುಖ್ಯಸ್ಥ ಡಾ. ಎಂ.ರಾಮಚಂದ್ರ ಕಾಮತ್‌, ಕಾರ್ಯಕಾರಿ ಸಮಿತಿ ಸದಸ್ಯ ಸನ್ಮತ್‌ ಹೆಗ್ಡೆ, ಕಾರ್ಯದರ್ಶಿ ಸಾಲಿಗ್ರಾಮ ಜಯರಾಮ ಆಚಾರ್ಯ, ಲಯನ್ಸ್‌ ಜಿಲ್ಲಾ ಗವರ್ನರ್‌ ನೀಲಕಂಠ ಎಂ.ಹೆಗ್ಡೆ, ಮುನಿಯಾಲು ಗೋಪಿನಾಥ ಭಟ್‌, ಮುನಿಯಾಲು ಲಯನ್ಸ್‌ ಕ್ಲಬ್‌ ಅಧ್ಯಕ್ಷ ಕಾಡುಹೊಳೆ ಮಂಜುನಾಥ್‌ ಟಿ, ಡಾ.ಕೆ.ಸುದರ್ಶನ್‌ ಹೆಬ್ಬಾರ್‌, ಶಂಕರ ಶೆಟ್ಟಿ, ಡಾ. ಪ್ರಮೋದ್‌ ಕುಮಾರ್‌ ಹೆಗ್ಡೆ, ಪಡುಕುಡೂರು ಅಶೋಕ್‌ ಎಂ. ಶೆಟ್ಟಿ, ಮಂಜುನಾಥ್‌, ಶಿವಪ್ರಸಾದ್‌ ಪೂಜಾರಿ ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

29/01/2021 11:21 pm

Cinque Terre

2.04 K

Cinque Terre

0

ಸಂಬಂಧಿತ ಸುದ್ದಿ