ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ಧಾಪುರ-ರೋಟರಿ ಗವರ್ನರ್ ಭೇಟಿ

ಸಿದ್ಧಾಪುರ ಹೊಸಂಗಡಿ ರೋಟರಿಯ ವಾರ್ಷಿಕ ಗವರ್ನರ್ ಭೇಟಿಯ ಕಾರ್ಯಕ್ರಮ ಸಿದ್ಧಾಪುರದ ಸಣ್ಣಯ್ಯ ಯಡಿಯಾಳ ರೋಟರಿ ಸಭಾಭವನದಲ್ಲಿ ನಡೆಯಿತು. ರೋಟರಿ ಜಿಲ್ಲೆ 3182 ರ ಗವರ್ನರ್ ರಾಜಾರಾಮ್ ಭಟ್ ಮಾತನಾಡಿ"ಸಿದ್ಧಾಪುರ- ಹೊಸಂಗಡಿ ರೋಟರಿಯು ಸಮಾಜಸೇವೆ ಮತ್ತು ವ್ಯಕ್ತಿತ್ವ ವಿಕಸನವನ್ನು ಮೂಲವಾಗಿಸಿಕೊಂಡು ಯಶಸ್ವಿ 25 ವರ್ಷ ಪೊರೈಸಿದ್ದು ಸಮಸ್ತ ರೋಟರಿ ಜಿಲ್ಲೆಯು ಹೆಮ್ಮೆಪಡುವಂತಾಗಿದೆ. ಕೊರೊನಾದ ಪ್ರತಿಕೂಲ ಸನ್ನಿವೇಶಗಳಲ್ಲೂ ಸಂಸ್ಥೆಯು ಹಿಂಜರಿಯದೆ ಕ್ರಿಯಾಶೀಲವಾಗಿ ಸಮಾಜಕ್ಕೆ ಸ್ಪಂದಿಸಿರುವುದು ಮಾದರಿಯಾಗಿದೆ" ಎಂದರು.

ಸಮಾರಂಭದಲ್ಲಿ ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾದ ಕಿಶೋರ್ ಕುಮಾರ್ ಕೊಡ್ಗಿಯವರನ್ನು ಸಮ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರೋಟರಿ ವತಿಯಿಂದ ವಿದ್ಯಾರ್ಥಿವೇತನ ನೀಡಲಾಯಿತು. ಸಂಸ್ಥೆಯ ಕಾರ್ಯಕ್ರಮ ಮತ್ತು ಲೇಖನಗಳ ಸಂಚಿಕೆ "ವಾರಾಹಿ" ಯನ್ನು ಅಸಿಸ್ಟೆಂಟ್ ಗವರ್ನರ್ ಡಾ.ನಾಗಭೂಷಣ್ ಉಡುಪ ಬಿಡುಗಡೆಗೊಳಿಸಿದರು. ಸಂಪಾದಕ ಮುಷ್ತಾಕ್ ಹೆನ್ನಾಬೈಲ್ ಸಹಕರಿಸಿದರು. ಪಾಂಡುರಂಗ ಪೈ ಗವರ್ನರ್ ಪರಿಚಯ ಮಾಡಿಸಿದರು. ಡಾ. ಜಗದೀಶ್ ಶೆಟ್ಟಿ ಸಮ್ಮಾನ ಪತ್ರ ವಾಚಿಸಿದರು. ರೋಟರಿ ಅಧ್ಯಕ್ಷ ಅನಂತಮೂರ್ತಿ ಮಾವಿನಮನೆ ಅಧ್ಯಕ್ಷತೆ ವಹಿಸಿದರು. ವಲಯ ಸೇನಾನಿ ಉಮೇಶ್ ರಾವ್ ಉಪಸ್ಥಿತರಿದ್ದರು. ಸುಭಾಶ್ಚಂದ್ರ ಶೆಟ್ಟಿ ಸ್ವಾಗತಿಸಿದರು.ಕಾರ್ಯದರ್ಶಿ ರಮೇಶ್ ಕೊಡ್ಗಿ ವಂದನಾರ್ಪಣೆಗೈದರು. ಸಂತೋಷ್ ಕುಮಾರ್ ಶೆಟ್ಟಿ ನಿರೂಪಿಸಿದರು.

Edited By : Nagaraj Tulugeri
Kshetra Samachara

Kshetra Samachara

10/01/2021 08:44 pm

Cinque Terre

8.34 K

Cinque Terre

0

ಸಂಬಂಧಿತ ಸುದ್ದಿ