ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಂಗಾಳ: "ಗರೋಡಿಗಳು ಧಾರ್ಮಿಕತೆಯೊಂದಿಗೆ ಸಾಮರಸ್ಯದ ಕೇಂದ್ರಗಳು"

ಕಾಪು: ಗರೋಡಿ ಗೈಸ್ ವಾಟ್ಸ್ ಆ್ಯಪ್‌‌ ಗ್ರೂಪ್ ನ ನಾಲ್ಕನೇ ವರ್ಷದ ವಾರ್ಷಿಕ ಸಮ್ಮಿಲನ‌ ಮಿನದನ- 2020-21 ಕಾರ್ಯಕ್ರಮ ಪಾಂಗಾಳಗುಡ್ಡೆ ಶ್ರೀ ಬ್ರಹ್ಮಬೈದರ್ಕಳ ಗರೋಡಿಯಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಓಟ್ಲ ಶ್ರೀ ಬ್ರಹ್ಮಬೈದರ್ಕಳ ಗರೋಡಿಯ ಧರ್ಮದರ್ಶಿ ಜನಾರ್ದನ ಬಂಗೇರ ಮಾತನಾಡಿ, ಗರೋಡಿಗಳು ಧಾರ್ಮಿಕತೆಯೊಂದಿಗೆ ಸಾಮಾಜಿಕ ಸಾಮರಸ್ಯದ ಕೇಂದ್ರಗಳಾಗಿದ್ದು, ಗರೋಡಿಗಳಲ್ಲಿ ನಡೆಯುವ ಧಾರ್ಮಿಕ ಆಚರಣೆಗಳಲ್ಲಿ ಹಿರಿಯರ ಜೊತೆಗೆ ಯುವಕರೂ ಕೈ ಜೋಡಿಸುವಂತಾಗುವಲ್ಲಿ ಪೂರಕ ಮಾರ್ಗದರ್ಶನ ಅತ್ಯಗತ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗರೋಡಿಗಳಲ್ಲಿ ನಡೆಯುವ ಆಚರಣೆ, ಆರಾಧನೆ ಪದ್ಧತಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗುತ್ತಿರುವುದು ಬೇಸರದ ವಿಚಾರ. ಈ ನಿಟ್ಟಿನಲ್ಲಿ ಗರೋಡಿಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ವೇಳೆ ಮೊಬೈಲ್ ಬಳಕೆ ನಿಷೇಧಿಸುವ ಬಗ್ಗೆ ಆಡಳಿತ ಮಂಡಳಿಗಳು ಚಿಂತನೆ ನಡೆಸಬೇಕು ಎಂದರು.

* ವಿಚಾರ ಮಂಡನೆ : ಯುವಜನರಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಜವಾಬ್ದಾರಿ ಹೆಚ್ಚಿಸುವಲ್ಲಿ‌ ಮಾಧ್ಯಮದ ಪಾತ್ರದ ಕುರಿತಾಗಿ ರಾಣಿ ಅಬ್ಬಕ್ಕ ಪ್ರಾಚ್ಯ ವಸ್ತು ಸಂಗ್ರಹಾಲಯದ ಅಧ್ಯಕ್ಷ ಪ್ರೊ.ತುಕಾರಾಮ ಪೂಜಾರಿ, ಗರೋಡಿಗಳಲ್ಲಿ ಮಾಯಂದಾಲ್ ಆರಾಧನೆ ಕುರಿತಾಗಿ ತೆಂಕನಿಡಿಯೂರು ಪ್ರಥಮ‌ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ರತ್ನಮಾಲ, ಗರೋಡಿ ಮತ್ತು ಸಮುದಾಯದ ನಡುವೆ ಸಾಮರಸ್ಯ‌ ಮೂಡಿಸುವಲ್ಲಿ ಗುರಿಕಾರರ ಪಾತ್ರದ ಬಗ್ಗೆ ಪಾಂಗಾಳಗುಡ್ಡೆ ಗರೋಡಿ ಸುಧಾಕರ ಡಿ. ಅಮೀನ್ ವಿಚಾರ ಮಂಡಿಸಿದರು.

*ಸನ್ಮಾನ : ಹಿರಿಯ ಬೈದರ್ಕಳ ದರ್ಶನ ಪೂಜಾರಿ ಕೋಟಿ ಪೂಜಾರಿ ಸೂಡ, ಚಂದ್ರಕಾಂತ ಯಾನೆ ಕಾಂತು ಪೂಜಾರಿ ಕಲ್ಲಗುಡ್ಡೆ, ಬೈದರ್ಕಳ ಪೂಜಾ ಪೂಜಾರಿ ವಿಶ್ವನಾಥ ಅಮೀನ್ ಕಳತ್ತೂರು, ಸಾಧಕ ಸುರೇಂದ್ರ ಮೋಹನ್ ಅವರನ್ನು ಸನ್ಮಾನಿಸಲಾಯಿತು.

ಪಾಂಗಾಳ ಗುಡ್ಡೆ ಗರೋಡಿಯ ಆಡಳಿತ ಮೊಕ್ತೇಸರ ಶೇಖರ್ ಜಿ.‌ ಅಮೀನ್, ಗರೋಡಿ ಗುರಿಕಾರ ಜಯ ಡಿ. ಅಮೀನ್ ಹಾಗೂ ವಿವಿಧ ಗರೋಡಿಗಳ ಪ್ರಮುಖರು, ದರ್ಶನ‌ ಪೂಜಾರಿ, ಪೂಜಾ ಪೂಜಾರಿಗಳು, ಗುರಿಕಾರರು ಉಪಸ್ಥಿತರಿದ್ದರು.

ಸಂಘಟಕರಾದ ಅರವಿಂದ್ ಕೋಟ್ಯಾನ್ ಕಲ್ಲುಗುಡ್ಡೆ ಸ್ವಾಗತಿಸಿದರು. ದಯಾನಂದ ಕರ್ಕೇರ ಉಗ್ಗೆಲ್ ಬೆಟ್ಟು ಪ್ರಸ್ತಾವನೆಗೈದರು. ಯಶ್ ಅಮೀನ್, ಪಾಂಗಳಗುಡ್ಡೆ ಗರೋಡಿ ವಂದಿಸಿದರು. ಪಾಂಡು ಕೋಟ್ಯಾನ್ ಮತ್ತು ಸಚಿನ್ ಪೂಜಾರಿ ನಿರೂಪಿಸಿದರು.

Edited By : Nagaraj Tulugeri
Kshetra Samachara

Kshetra Samachara

04/01/2021 08:10 pm

Cinque Terre

5.92 K

Cinque Terre

1

ಸಂಬಂಧಿತ ಸುದ್ದಿ