ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರೂರು: ಒಂಟಿ ಜೀವದ ನೆರವಿಗೆ ಧಾವಿಸಿ ಮಾನವೀಯತೆ ಮೆರೆದ ಎಸ್ಡಿಪಿಐ ಕಾರ್ಯಕರ್ತರು

ಬೈಂದೂರು: ಶಿರೂರು ಮಾರ್ಕೆಟಿನ ಎಮ್ ಜಿ ಎಮ್ ಮೆಡಿಕಲ್ಸ್ ಹಿಂಬದಿ ಬಾಡಿಗೆ ಮನೆಯಲ್ಲಿ ಒಬ್ಬಂಟಿ ಜೀವನ ಸಾಗಿಸುತ್ತಿದ್ದ ತಿಮ್ಮಪ್ಪ ಮೋಗೆರ್ 50 ವರ್ಷ ಮೆಲ್ಪಟ್ಟ ಪ್ರಾಯದವರಾಗಿದ್ದು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಒಂಟಿ ಜೀವದ ನೆರವಿಗೆ ಯಾರೂ ಬಾರದ ಸಂದರ್ಭ ಎಸ್ಡಿಪಿಐ ಕಾರ್ಯಕರ್ತರಿಗೆ ವಿಷಯ ತಿಳಿಸಲಾಯಿತು. ತಕ್ಷಣ ಕಾರ್ಯಪ್ರವೃತ್ತರಾದ ಕಾರ್ಯಕರ್ತರು ತಿಮ್ಮಪ್ಪ ಮೊಗೇರ್ ಅವರಿಗೆ ಸೂಕ್ತ ಚಿಕಿತ್ಸೆ ನೀಡಿ, ಮನೆಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.

ಈ ಸಂದರ್ಭ ಎಸ್ಡಿಪಿಐ ಶಿರೂರು ಪಂಚಾಯತ್ ಸದಸ್ಯೆ ರಹೀಮ, ಎಸ್ಡಿಪಿಐ ಮಾರ್ಕೆಟ್ ಬ್ರಾಂಚ್ ಅಧ್ಯಕ್ಷರಾದ ಬುಡ್ಡು ಅಬ್ದುಲ್ ಗನಿ, ಎಸ್ಡಿಪಿಐ ಹಡವಿನಕೋಣೆ ಬ್ರಾಂಚ್ ಅಧ್ಯಕ್ಷರಾದ ಮಣೆಗಾರ್ ಇಸಾಕ್,ಪಿಎಫ್ಐ ಮಾರ್ಕೆಟ್ ಘಟಕದ ಕಾರ್ಯದರ್ಶಿ ಬಿಕ್ಬಾ ತವಾಬ್ ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

30/09/2020 01:29 pm

Cinque Terre

3.49 K

Cinque Terre

0

ಸಂಬಂಧಿತ ಸುದ್ದಿ