ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ ; ಗೊಮ್ಮಟ ನಗರಿಯಲ್ಲಿ "ಕಾರ್ಕಳ ಉತ್ಸವ" ವೈಭವ

-ರಹೀಂ ಉಜಿರೆ

ರಾಜ್ಯದ ಇಂಧನ ಸಚಿವರು ತನ್ನ ಕ್ಷೇತ್ರದ ಜನರಿಗಾಗಿ ಹತ್ತು ದಿನಗಳ ಉತ್ಸವವನ್ನು ಏರ್ಪಡಿಸಿದ್ದಾರೆ. ಜನರೊಂದಿಗೇ ಇದ್ದು ತನ್ನೂರಿನ ಹಬ್ಬವನ್ನು ಸಂಭ್ರಮಿಸುತ್ತಿದ್ದಾರೆ. ಇಂಧನ ಸಚಿವರ ಊರು ರಾತ್ರಿ ವೇಳೆ ವಿದ್ಯುತ್ ದೀಪಾಲಂಕಾರದಿಂದ ಜಗ ಮಗಿಸುತ್ತಿದೆ.

ಸುಮಾರು ಹತ್ತು ದಿನಗಳ ಕಾಲ ನಡೆಯಲಿರುವ ಕಾರ್ಕಳ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಬೇರೆ ಬೇರ ವೇದಿಕೆಗಳಲ್ಲಿ ಆಯೋಜನೆ ಮಾಡಲಾಗಿದ್ದು ಆಹಾರ ಪ್ರಿಯರಿಗೆ ಮೇಳ, ಗೂಡು ದೀಪ ಉತ್ಸವ, ಗಾಳಿ ಪಟ ಉತ್ಸವ, ಚಲನ ಚಿತ್ರ ಉತ್ಸವ ಕೂಡ ಹಮ್ಮಿಕೊಳ್ಳಲಾಗಿದೆ.. ಅದರಲ್ಲೂ ಮುಖ್ಯವಾಗಿ ಹೆಲಿಕಾಪ್ಟರ್ ವಿಹಾರ ಮಾಡೋ ಅವಕಾಶವನ್ನು ಕಡಿಮೆ ದರದಲ್ಲಿ ಕಲ್ಪಿಸಲಾಗಿದ್ದು ಜನರು ಕಾರ್ಕಳದ ವಿಹಂಗಮ ದೃಶ್ಯ ಕಂಡು ಸಂತೋಷ ಪಡುತ್ತಿದ್ದಾರೆ.

ಕಾರ್ಕಳ ಉತ್ಸವದ ಪ್ರಮುಖ ಆಕರ್ಷಣೆಯೇ ವಿದ್ಯುತ್ ದೀಪಾಲಂಕಾರ. ಇಡೀ ನಗರವನ್ನು ವಿಶೇಷವಾಗಿ ಬಣ್ಣ ಬಣ್ಣದ ಲೈಟಿಂಗ್‌ನಿಂದ ಅಲಂಕಾರ ಮಾಡಲಾಗಿದ್ದು,ರಾತ್ರಿ ವೇಳೆ ಆಕರ್ಷಕ ಲೈಟಿಂಗ್ ನೋಡುವುದಕ್ಕೆ ಜನ ಸಾಗರ ಹರಿದು ಬರುತ್ತಿದೆ. ಅಲ್ಲದೇ ಕ್ಷೇತ್ರದ ಜನರಿಗಾಗಿ ನದಿ ದೋಣಿ ವಿಹಾರ ಕೂಡ ನಡೆಸಲಾಗುತ್ತಿದ್ದು, ಜನ ದೋಣಿಯಲ್ಲಿ ಕೂತು ಎಂಜಾಯ್ ಮಾಡುತ್ತಿದ್ದಾರೆ..

ಒಟ್ಟಿನಲ್ಲಿ ಹತ್ತು ದಿನಗಳ ಕಾಲ ನಡೆಯುವ ಕಾರ್ಕಳ ಉತ್ಸವ 20 ನೇ ತಾರೀಖಿನಂದು ಕೊನೆಗೊಳ್ಳಲಿದ್ದು, ಕರಾವಳಿ ಜನರು ಸಾಂಸ್ಕೃತಿಕ ಸಡಗರದಲ್ಲಿ ಮಿಂದೇಳುತ್ತಿದ್ದಾರೆ.

Edited By :
PublicNext

PublicNext

15/03/2022 12:23 pm

Cinque Terre

35.47 K

Cinque Terre

0

ಸಂಬಂಧಿತ ಸುದ್ದಿ