ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಮಳೆಗಾಲಕ್ಕೆ ಸಿದ್ಧತೆ; ನೆರೆ ಸಂದರ್ಭ ರಕ್ಷಣಾ ಕಾರ್ಯ ಕುರಿತು ಅಣಕು ಕಾರ್ಯಾಚರಣೆ

ಕಂದಾಯ ಇಲಾಖೆ, ಪುರಸಭೆ, ಬಳ್ಳೂರು ಗ್ರಾಮ ಪಂಚಾಯಿತಿ, ವಲಯ ಶಿಕ್ಷಣ ಇಲಾಖೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಆರೋಗ್ಯ ಇಲಾಖೆ ಆಶ್ರಯದಲ್ಲಿ ವಾರಾಹಿ ನದಿಯಲ್ಲಿ ನೆರೆ ದುರಂತ ಮುಂಜಾಗ್ರತೆ ಕುರಿತು ಅಣಕು ಕಾರ್ಯಾಚರಣೆ ನಡೆಯಿತು.

ಅಗ್ನಿಶಾಮಕ ಸಿಬ್ಬಂದಿ ನದಿಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿ ಬೋಟಿಗೆ ಅರೆಕ್ಷಣದಲ್ಲಿ ಹಾಕಿದರು. ಅರೆಪ್ರಜ್ಞಾವಸ್ಥೆಯಲ್ಲಿದ್ದ ವ್ಯಕ್ತಿಯನ್ನು ಎತ್ತಿ ಸ್ಟ್ರೆಚರ್‌ನಲ್ಲಿ ಮಲಗಿಸಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು.

ನದಿಗೆ ಬಿದ್ದ ವ್ಯಕ್ತಿ, ಸ್ಥಳಗಳ ಕುರಿತು ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದ ತಕ್ಷಣ ಸ್ಥಳಕ್ಕೆ ಆಗಮಿಸುವ ಫಯರ್ ಎಂಜಿನ್, ವಾಹನದಲ್ಲಿ ತಂದ ಬೋಟ್ ಇಳಿಸಿ, ಯಂತ್ರ ಜೋಡಿಸಿ, ನೀರಿಗೆ ಬಿದ್ದ ವ್ಯಕ್ತಿಯನ್ನು ಕಾಪಾಡುವ ಕೆಲಸ ಕ್ಷಣಮಾತ್ರದಲ್ಲಿ ನಡೆಯಿತು. ನದಿಗೆ ಬಿದ್ದವರ ರಕ್ಷಣೆ, ನೆರೆ ಸಂದರ್ಭ ಸಂಪರ್ಕ ಕಳೆದುಕೊಳ್ಳುವವರ ಸ್ಥಳಾಂತರದ ಬಗ್ಗೆ ಮಾಹಿತಿ ನೀಡಲಾಯಿತು. ಪ್ರಾತ್ಯಕ್ಷಿಕೆಯಲ್ಲಿ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಗ್ರಾಪಂ ಸದಸ್ಯರು ಪಾಲ್ಗೊಂಡಿದ್ದರು.

Edited By :
Kshetra Samachara

Kshetra Samachara

09/06/2022 12:48 pm

Cinque Terre

5.36 K

Cinque Terre

0

ಸಂಬಂಧಿತ ಸುದ್ದಿ