ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರ್ವ: ಬಂಟಕಲ್ಲು ಎಂಜಿನಿಯರಿಂಗ್ ಕಾಲೇಜ್ ಪದವಿ ಪ್ರದಾನ

ಶಿರ್ವ: ಪದವೀಧರರು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ವೃತ್ತಿ ಕ್ಷೇತ್ರದ ಸವಾಲು ಎದುರಿಸಲು ಸಿದ್ಧರಾಗಬೇಕು ಎಂದು ಮೈಂಡ್ ಟ್ರೀ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿ ಪನೀಶ್ ರಾವ್ ಹೇಳಿದರು.

ಭಾನುವಾರ ಉಡುಪಿ ಜಿಲ್ಲೆಯ ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಏಳನೇ ವರ್ಷದ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಉಡುಪಿ ಶ್ರೀ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪ್ರಾಮಾಣಿಕ ಪ್ರಯತ್ನದಿಂದ ಸಮಾಜಕ್ಕೆ ಉಪಯುಕ್ತವಾಗಬೇಕೆಂದರು.

ಗಣಕಯಂತ್ರ ವಿಭಾಗದ ವಿದಿಶಾ ಪಿ.ಶೇಟ್, ಸಿವಿಲ್ ವಿಭಾಗದ ನಾಗಾರ್ಜುನ,ಎಸ್.ಜಿ.ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ತೇಜಶ್ರೀ, ಯಂತ್ರಶಿಲ್ಪ ವಿಭಾಗದ ದೀಪಕ್ ಆಚಾರ್ ಅವರಿಗೆ ಮಂಗಳೂರಿನ ಎಸ್.ಎಲ್. ಶೇಟ್ ಜ್ಯುವೆಲ್ಲರ್ಸ್ ನ ಪ್ರಶಾಂತ್ ಶೇಟ್ ಮತ್ತು ಹೇಮಂತ್ ಶೇಟ್ ಪ್ರಾಯೋಜಿತ ಚಿನ್ನದ ಪದಕ ಪ್ರದಾನ ಮಾಡಲಾಯಿತು.

ಶ್ರೇಯಸ್ ಪ್ರಭು ಮತ್ತು ರುಷಾಲಿ ನಾಯಕ್ ಅವರನ್ನು ಉತ್ತಮ ಶೈಕ್ಷಣಿಕ ಸಾಧನೆಗಾಗಿ ಶ್ರೀ ಮಧ್ವ ವಾದಿರಾಜ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಸಂಸ್ಥೆ ಕಾರ್ಯದರ್ಶಿ ರತ್ನಕುಮಾರ್, ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್,ಡಾ.ಗಣೇಶ್ ಐತಾಳ್, ಡಾ.ಸುದರ್ಶನ್ ರಾವ್,ಡಾ ರೀನಾ ಕುಮಾರಿ, ಸ್ನೇಹಾ ಜೋಸ್ವಿಟಾ ಡಿಸೋಜ,ರೆನಿಟಾ ಶರೋನ್ ಮೋನಿಶ್,ಡಾ.ಲೊಲಿಟಾ ಪ್ರಿಯಾ ಕ್ಯಾಸ್ತಲಿನೋ ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

14/12/2020 08:55 am

Cinque Terre

9.01 K

Cinque Terre

0

ಸಂಬಂಧಿತ ಸುದ್ದಿ