ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: "ಮಹಾನಾಯಕನ ಆದರ್ಶ ಮೈಗೂಡಿಸಿಕೊಂಡು ಸಮಾಜಕ್ಕೆ ಮಾದರಿಯಾಗೋಣ"

ಮುಲ್ಕಿ: ಡಾ.ಬಿ.ಆರ್. ಅಂಬೇಡ್ಕರ್ ಅವರ 64ನೇ ಪರಿನಿರ್ವಾಣ ಅಂಗವಾಗಿ ಆದರ್ಶ ಯುವಕ ವೃಂದದಿಂದ ಸಂಸ್ಮರಣೆ ಕಾರ್ಯಕ್ರಮ ನಡೆಯಿತು.

ಮುಲ್ಕಿ ನ.ಪಂ. ಸದಸ್ಯರಾದ ಮಂಜುನಾಥ್ ಕಂಬಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಹಾನಾಯಕ ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವಾದರ್ಶ ಮೈಗೂಡಿಸಿಕೊಂಡು ಸಮಾಜಕ್ಕೆ ಮಾದರಿಯಾಗೋಣ ಎಂದರು. ನ.ಪಂ. ಸದಸ್ಯ ಸಂದೀಪ್ ಕುಮಾರ್, ಆದರ್ಶ ಯುವಕ ವೃಂದ ಅಧ್ಯಕ್ಷ ಭೀಮಶಂಕರ್ ಆರ್. ಕೆ., ಅಶೋಕ್ ಎಚ್. ಪೂಜಾರ್, ಮಹಾಗೊಂಡಪ್ಪ ಗೌಡ ಹಂಗರಗಿ, ಅರ್ಜುನ್, ವೀರೇಶ್ ಹಿರೇಮಠ, ವೀರಣ್ಣ ಅರಳಗುಂಡಗಿ, ನಾಗೇಶ್ ಎನ್. ಎನ್., ಮಂಜುನಾಥ್ ಆರ್. ಕೆ., ಶಿವಾನಂದ್ ಆರ್ .ಕೆ., ಜಟ್ಟಿಂಗರಾಯ ಬಿ.ಕೆ. ಮತ್ತಿತರರು ಭಾಗವಹಿಸಿದ್ದರು. ಹರೀಶ ಸ್ವಾಮಿ ಪುಷ್ಪಾರ್ಚನೆ ನೆರವೇರಿಸಿದರು

Edited By : Nagaraj Tulugeri
Kshetra Samachara

Kshetra Samachara

06/12/2020 09:14 pm

Cinque Terre

6.75 K

Cinque Terre

1

ಸಂಬಂಧಿತ ಸುದ್ದಿ