ಉಡುಪಿ: ಮನೆಯೊಂದಕ್ಕೆ ನುಗ್ಗಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಘಟನೆ ಉಡುಪಿಯ ಕೊಡಂಕೂರಿನಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಸತ್ಯನಾರಾಯಣ ಹೆಗಡೆ ಅವರು ತಮ್ಮ ಊರಾದ ಶಿರಸಿಗೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಜೂ. 17ರಿಂದ 30ರ ನಡುವೆ ಈ ಕಳ್ಳತನ ನಡೆದಿದೆ ಎನ್ನಲಾಗಿದೆ.
ಕಳ್ಳರು 4 ಗ್ರಾಂ ಚಿನ್ನದ ನಾಣ್ಯ, 2 ವಾಚ್, ಬೆಳ್ಳಿ ಪದಕ, ಲಕ್ಷ್ಮೀ ಬೆಳ್ಳಿ ಪದಕ, ರುದ್ರಾಕ್ಷಿ ಬೆಳ್ಳಿ ಸರ ಹಾಗೂ 10,000 ರೂ. ನಗದು ಕಳವು ಮಾಡಿದ್ದಾರೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 39,000 ರೂ. ಆಗಿದೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
06/07/2022 01:28 pm