ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: 16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಕಾರ್ಕಳ ಪೊಲೀಸರ ವಶಕ್ಕೆ!

ಕಾರ್ಕಳ: ಜೀವ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 16 ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಉಡುಪಿ ಜಿಲ್ಲೆಯ ಕಾರ್ಕಳ ಪೊಲೀಸರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಳ್ತಂಗಡಿ ತಾಲೂಕು ಕಾಶಿಬೆಟ್ಟು ನಿವಾಸಿ ವೇಲು,ಕಾರ್ಕಳದಲ್ಲಿ ಕೇಬಲ್‌ ವ್ಯಾಪಾರ ನಡೆಸುತ್ತಿದ್ದ ಕುಕ್ಕುಂದೂರು ಹುಡ್ಕೊ ನಿವಾಸಿ ಪ್ರಶಾಂತ್‌ ನಾಯಕ್‌ ಅವರಿಗೆ 2006ರಲ್ಲಿ ಚೂರಿ ತೋರಿಸಿ ಬೆದರಿಕೆ ಒಡ್ಡಿ, ಬಳಿಕ ತಲೆಮರೆಸಿಕೊಂಡಿದ್ದ. ಕಾರ್ಕಳದ ನ್ಯಾಯಾಲಯವು ಆರೋಪಿಯ ದಸ್ತಗಿರಿಗಾಗಿ ಬಂಧನ ವಾರಂಟ್‌ ಹೊರಡಿಸಿತ್ತು.

ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ವೇಲು ಜೂ. 13ರಂದು ಬೆಳ್ತಂಗಡಿಗೆ ಬಂದಿರುವ ಮಾಹಿತಿ ಪಡೆದ ಕಾರ್ಕಳ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Edited By : PublicNext Desk
Kshetra Samachara

Kshetra Samachara

15/06/2022 12:10 pm

Cinque Terre

2.83 K

Cinque Terre

0

ಸಂಬಂಧಿತ ಸುದ್ದಿ