ಉಡುಪಿ: ಉಡುಪಿಯ ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಂಪ್ಯೂಟರ್ ಕಳವಾಗಿದೆ.ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜೂ.11ರ ಅಪರಾಹ್ನ 2 ಗಂಟೆಯಿಂದ ಜೂ.12ರ ಬೆಳಗ್ಗೆ 8:30ರ ಮಧ್ಯಾವಧಿಯಲ್ಲಿ ಟೇಬಲ್ ಮೇಲೆ ಇದ್ದ ಕಂಪ್ಯೂಟರ್, ಸಿಪಿಯು, ಕೀ ಬೋರ್ಡ್, ಮೌಸ್ ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಅವುಗಳ ಒಟ್ಟು ಮೌಲ್ಯ 8,000 ರೂ. ಎಂದು ಅಂದಾಜಿಸಲಾಗಿದೆ. ಇಂಜಿನಿಯರ್ ಪ್ರಕಾಶ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಬಿ.ಆರ್.ಶೆಟ್ಟಿ ಮಾಲಕತ್ವದ ಬಿಆರ್‌ಎಸ್ ಲೈಫ್ ಗ್ರೂಪ್‌ನವರು ಇತ್ತೀಚೆಗೆ ಆಸ್ಪತ್ರೆಯ ಸೋಫಾ, ಕಪಾಟು, ಕುರ್ಚಿ, ಟೇಬಲ್ ಸೇರಿದಂತೆ ಕೆಲವು ಪರಿಕರಗಳನ್ನು ಅಕ್ರಮವಾಗಿ ಸಾಗಾಟಕ್ಕೆ ಯತ್ನಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
Kshetra Samachara
14/06/2022 06:30 pm