ಬೈಂದೂರು :ಇಲ್ಲಿನ ಮೊಹಮ್ಮದ್ ಪೈಸೂಲ್ ಬ್ಯಾರಿ ಅವರ ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ಬೈದು, ಗಲಾಟೆ ಮಾಡಿ ಜೀವ ಬೆದರಿಕೆ ಹಾಕಿದ ಬಗ್ಗೆ ಐವರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ಮೊಹಮ್ಮದ್ ಪೈಸೂಲ್ ಬ್ಯಾರಿ ಅವರು ಬೈಂದೂರು ಜಾಮೀಯಾ ಮಸೀದಿಯಲ್ಲಿ ಇಮಾಮ್ ಖತೀಬ್ ನಾಗಿ 25 ವರ್ಷ ಸೇವೆ ಸಲ್ಲಿಸುತ್ತಿದ್ದರು.
ಅವರು ತಮ್ಮ ಹೆಂಡತಿಯೊಂದಿಗೆ ಮನೆಯಲ್ಲಿದ್ದ ಸಂದರ್ಭದಲ್ಲಿ ಮನೆಗೆ ಬಂದ ಮೊಹಮ್ಮದ್ ಸುಲ್ತಾನ್, ಮೊಹಮ್ಮದ್ ಅಕ್ಬರ್, ಅಬ್ದುಲ್ ಸುಹಾನ್, ಪೈಜಾನ್, ಇನ್ನಿತರರು ಅವಾಚ್ಯ ಶಬ್ಧದಿಂದ ಬೈದು ಜೀವಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
04/05/2022 11:34 am