ಕಾರ್ಕಳ: ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದ ಕೃಷ್ಣ ಸಭಾಂಗಣದಲ್ಲಿ ಎ. 21ರಂದು ನಡೆದ ವಿವಾಹ ಸಮಾರಂಭದಲ್ಲಿ ಚಿನ್ನದ ಸರ ಎಗರಿಸಿದ್ದ ಆರೋಪಿ ಪಳ್ಳಿ ಗ್ರಾಮದ ದಿಡಿಂಬೊಟ್ಟು ನಿವಾಸಿ ಸುರೇಶ್ ಪೂಜಾರಿಯನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದಾರೆ.
ಮದುವೆ ದಿನ ಬೆಳ್ತಂಗಡಿ ತಾಲೂಕು ಅಚ್ಛಿನಡ್ಕ ಭವಾನಿ ಅವರು ಮದುಮಗನ ಡ್ರೆಸ್ಸಿಂಗ್ ರೂಂನಲ್ಲಿ ಇರಿಸಿದ್ದ ವ್ಯಾನಿಟಿ ಬ್ಯಾಗ್ ಕಾಣೆಯಾಗಿತ್ತು. ಬ್ಯಾಗ್‌ನಲ್ಲಿ 52 ಸಾವಿರ ರೂ. ಚಿನ್ನದ ಸರ, 6 ಸಾವಿರ ರೂ. ಮೌಲ್ಯದ ಮೊಬೈಲ್, 1,200 ರೂ. ನಗದು ಕಳ್ಳತನವಾಗಿತ್ತು.
ಭವಾನಿ ಅವರು ನೀಡಿದ ದೂರಿನಂತೆ ತನಿಖೆ ನಡೆಸಿದ ಪೊಲೀಸರು ಸಂಶಯದ ಮೇರೆಗೆ ಆರೋಪಿಯನ್ನು ಎ. 28ರಂದು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ವಿಚಾರವನ್ನು ಆತ ಬಾಯಿಟ್ಟಿದ್ದ. ಆಭರಣ ಅಡವಿಟ್ಟು ಹಣ ಸಾಲ ಪಡೆದಿರುವುದಾಗಿ ತಿಳಿಸಿದ್ದಾನೆ.
Kshetra Samachara
29/04/2022 09:50 am