ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಕೊಟ್ಟ ಸಾಲ ವಾಪಾಸ್ ಕೇಳಿದಕ್ಕೆ ಕೊಲೆ ಬೆದರಿಕೆ!

ಬೈಂದೂರು: ಲಕ್ಷಾಂತರ ರೂಪಾಯಿ ಸಾಲ ಪಡೆದು ವಾಪಸ್ಸು ನೀಡದೆ ವಂಚಿಸಿರುವುದು ಮಾತ್ರವಲ್ಲದೆ ಸಾಲ ವಾಪಸ್ಸು ಕೇಳಿದಕ್ಕೆ ಅವಾಚ್ಯ ಶಬ್ಧಗಳಿಂದ ಬೈದು ಕೊಲೆ ಬೆದರಿಕೆ ಹಾಕಿದ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ.

2021 ಜೂನ್ ತಿಂಗಳಲ್ಲಿ ಸಾಗರ್ ಆಚಾರ್ಯ ಸಂಬಂಧಿ ಶಿವಮೊಗ್ಗದ ಸತ್ಯನಾರಾಯಣ ಆಚಾರ್ಯ ವ್ಯವಹಾರ ಸಂಬಂಧ 10 ಲಕ್ಷ ರೂ ಸಾಲದ ಬೇಡಿಕೆ ಇಟ್ಟಿದ್ದ, ಅದರಂತೆ ಸಾಗರ್ ಅವರು ತಮ್ಮ ಖಾತೆಯಿಂದ ಮತ್ತು ದೊಡ್ಡಪ್ಪನ ಮಗ ರಮೇಶ್ ಆಚಾರ್ಯ ಖಾತೆಯಿಂದ ಹಂತ ಹಂತವಾಗಿ 6,39,000 ರೂಪಾಯಿಗಳನ್ನು ನೀಡಿದ್ದರು. ಆದರೆ ಇದೀಗ ವಾಪಾಸ್ಸು ಕೇಳಿದರೆ ಹಣವನ್ನು ಕೊಡದೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದ್ದು,ಸಾಗರ್ ದೂರಿನ ಅನ್ವಯ ಸತ್ಯನಾರಾಯಣ ಎನ್ನುವವರ ಮೇಲೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : PublicNext Desk
Kshetra Samachara

Kshetra Samachara

25/04/2022 05:34 pm

Cinque Terre

2.88 K

Cinque Terre

0

ಸಂಬಂಧಿತ ಸುದ್ದಿ